ಭಾರತೀಯ ಕೈದಿಗಳಿಗೆ ಅಗತ್ಯ ವಸ್ತುಗಳ ನೆರವು

7

ಭಾರತೀಯ ಕೈದಿಗಳಿಗೆ ಅಗತ್ಯ ವಸ್ತುಗಳ ನೆರವು

Published:
Updated:

ಢಾಕಾ (ಪಿಟಿಐ): ಬಾಂಗ್ಲಾದೇಶದ ದಿನಜ್‌ಪುರ್ ಸೆಂಟ್ರಲ್ ಜೈಲಿನಲ್ಲಿರುವ ಭಾರತೀಯ ಕೈದಿಗಳಿಗೆ ಬುಧವಾರ ರಾಷ್ಟ್ರೀಯ ಜನೋಪಕಾರಿ ಸಮಾಜದಿಂದ ಅಗತ್ಯ ವಸ್ತುಗಳನ್ನು ಪೂರೈಸಲಾಯಿತು.ಗಡಿ ಅತಿಕ್ರಮಣ ಪ್ರವೇಶ ಹಾಗೂ ಕಳ್ಳಸಾಗಾಣಿಕೆಗೆ ಸಂಬಂಧಿಸಿದಂತೆ ಜೈಲುವಾಸ ಅನುಭವಿಸುತ್ತಿರುವ 15 ಭಾರತೀಯ ಕೈದಿಗಳಿಗೆ ಬಾಂಗ್ಲಾದೇಶದ ರೆಡ್ ಕ್ರೆಸೆಂಟ್ ಸೊಸೈಟಿಯು ಚಳಿಗಾಲದ ಬಟ್ಟೆ ಹಾಗೂ ಇತರ ಅಗತ್ಯ ವಸ್ತುಗಳನ್ನು ವಿತರಿಸಿತು ಎಂದು ದಿನಜ್‌ಪುರ್ ಜೈಲಿನ ಸೂಪರಿಂಟೆಂಡೆಂಟ್ ಶಹಜಹಾನ್ ಅಹ್ಮದ್ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry