ಭಾರತೀಯ ಮೂಲದ ವೈದ್ಯನ ಬಂಧನ

7

ಭಾರತೀಯ ಮೂಲದ ವೈದ್ಯನ ಬಂಧನ

Published:
Updated:

ಟೊರಾಂಟೊ (ಪಿಟಿಐ):  ಯುವತಿಯೊಬ್ಬಳಿಗೆ ಮತ್ತು ಬರಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಭಾರತೀಯ ಮೂಲದ ವೈದ್ಯನೂ ಸೇರಿದಂತೆ ಇಬ್ಬರು ವೈದ್ಯರನ್ನು ಬಂಧಿಸಲಾಗಿದೆ.ಭಾರತೀಯ ಮೂಲದವರಾದ ಅಮಿತಾಬ್ ಚೌಹಾಣ್ ಮತ್ತು ಸುಗನಾಥನ್ ಕೈಲಾಸನಾಥನ್ ಬಂಧಿತ ಆರೋಪಿಗಳು. ವೃತ್ತಿ ಸಂಬಂಧಿಸಿದಂತೆ ಸಲಹೆ ನೀಡುವ ನೆಪದಲ್ಲಿ 23 ವರ್ಷದ ಯುವತಿಯೊಬ್ಬಳನ್ನು ಬಾರ್ ಒಂದಕ್ಕೆ ಕರೆದೊಯ್ದು ಅಲ್ಲಿ ಮತ್ತು ಬರಿಸುವ ಔಷಧವನ್ನು ಆಕೆಗೆ ಕುಡಿಸಿ ನಂತರ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.ಆತ್ಮಾಹುತಿ ಕಾರ್‌ಬಾಂಬ್ ಸ್ಫೋಟ: ಎಂಟು ಸಾವು

ಮೊಗಡಿಶು (ಎಪಿ): ಆತ್ಮಾಹುತಿ ಬಾಂಬರ್ ಒಬ್ಬ ಸ್ಫೋಟಕ ತುಂಬಿದ್ದ ಕಾರೊಂದನ್ನು ಇಲ್ಲಿನ ಪೊಲೀಸ್ ಠಾಣೆಯೊಂದರಲ್ಲಿ ಸ್ಫೋಟಿಸಿದ್ದು ಎಂಟು ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಮಾದಕ ದ್ರವ್ಯ ಕಳ್ಳ ಸಾಗಾಟ: 40 ಜನ ಹತ್ಯೆ

ಸಿಯುಡಾಡ್ ಜುರೆಜ್/ಮೆಕ್ಸಿಕೊ, (ಎಎಫ್‌ಪಿ): ಮಾದಕ ದ್ರವ್ಯ ಸೇವನೆ, ಕಳ್ಳಸಾಗಾಟದಂತಹ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಳೆದ 72 ಗಂಟೆಗಳಲ್ಲಿ ಸಂಭವಿಸಿದ ಹಿಂಸಾಚಾರದಲ್ಲಿ 40 ಜನ ಹತ್ಯೆಗೀಡಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry