ನವದೆಹಲಿ (ಐಎಎನ್ಎಸ್): ಚಂಡೀಗಡ ವಿಮಾನನಿಲ್ದಾಣ ಬಳಿ ಮಾರ್ಚ್ 30ರಂದು ಪಾಕಿಸ್ತಾನಿ ದೂತಾವಾಸಕ್ಕೆ ಸೇರಿದ ಚಾಲಕನೊಬ್ಬನನ್ನು ಬಂಧಿಸಿದ್ದಕ್ಕೆ ಪ್ರತೀಕಾರ ರೂಪದಲ್ಲಿ ಇಸ್ಸಾಮಾಬಾದ್ನಲ್ಲಿ ಗುರುವಾರ ಭಾರತೀಯ ರಾಯಭಾರ ಕಚೇರಿಯ ಸಿಬ್ಬಂದಿಯೊಬ್ಬರನ್ನು ಅಪಹರಿಸಿ ನಿಗೂಢ ಸ್ಥಳಲ್ಲಿ ಇರಿಸಲಾಗಿತ್ತು. ಶುಕ್ರವಾರ ಅವರನ್ನು ಬಿಡುಗಡೆ ಮಾಡಲಾಗಿದೆ.

ಕ್ರಿಕೆಟ್ ನೆಪದಲ್ಲಿ ಮೊಹಾಲಿಯಲ್ಲಿ ಉಭಯ ಪ್ರಧಾನಿಗಳು ಸ್ನೇಹದ ಮಾತನಾಡುತ್ತಿದ್ದಾಗಲೇ ಈ ಘಟನೆ ನಡೆದಿದೆ. ಪಾಕಿಸ್ತಾನಿ ಚಾಲಕ ನಿಷೇಧಿತ ಸ್ಥಳದಲ್ಲಿ ಇದ್ದುದರಿಂದ ಆತನನ್ನು ಬಂಧಿಸಿ ಬಳಿಕ ಬಿಡುಗಡೆ ಮಾಡಲಾಗಿತ್ತು. ಆದರೆ ಪಾಕಿಸ್ತಾನ ಕೇವಲ ಸೇಡು ತೀರಿಸಿಕೊಳ್ಳುವ ಸಲುವಾಗಿ ಕಚೇರಿಯಿಂದ ಮನೆಗೆ ಮರಳುತ್ತಿದ್ದ ಭಾರತೀಯ ಅಧಿಕಾರಿಯನ್ನು ಬಚ್ಚಿಟ್ಟಿತ್ತು. ಆದರೆ ಅವರ ಹೆಸರನ್ನು ಮೂಲಗಳು ಬಹಿರಂಗಪಡಿಸಲು ಇಚ್ಛಿಸಲಿಲ್ಲ. ಆದರೆ ಅವರನ್ನು ಹೈಕಮಿಷನ್ನ ಕಾನ್ಸುಲರ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಆನಂದ್ ಶರ್ಮಾ ಎಂದು ಗುರುತಿಸಲಾಗಿದೆ.

ಈ ಅಧಿಕಾರಿಯನ್ನು ಬಿಡಿಸಿಕೊಳ್ಳಲು ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್ ಅವರು ತಮ್ಮ ಪಾಕ್ ಸಹವರ್ತಿ ಸಲ್ಮಾನ್ ಬಶೀರ್ ಅವರೊಂದಿಗೆ ಹಾಟ್ಲೈನ್ನಲ್ಲಿ ಸಂಪರ್ಕಿಸಿ ಮಾತನಾಡಬೇಕಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.