ಲಂಡನ್ (ಪಿಟಿಐ): ತೂತುಕುಡಿಯ ವೈದ್ಯ ಡಾ.ಗಿಫ್ಟಿ ಇಮ್ಯಾನುವೆಲ್ ಅವರು ವೈದ್ಯಕೀಯ ರಂಗದ ಉನ್ನತ ಪ್ರಶಸ್ತಿಯಾದ 2010 ಜೂನಿಯರ್ ಚೇಂಬರ್ ಇಂಟರ್‌ನ್ಯಾಷನಲ್ (ಜೆಸಿಐ) ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಈ ಪ್ರಶಸ್ತಿಗೆ ಆಯ್ಕೆಯಾದ ಹತ್ತು ಮಂದಿಯಲ್ಲಿ ಗಿಫ್ಟಿ ಅವರು ಸೇರಿದ್ದಾರೆ. ಡಾ.ಗಿಫ್ಟಿ ಇಮ್ಯಾನುವೆಲ್ ಅವರು ಪ್ರಸ್ತುತ ಯೆಹೂದಿ-ಕ್ರೈಸ್ತ ಸಂಬಂಧಗಳ ಕುರಿತು ಅಧ್ಯಯನ ನಡೆಸುತ್ತಿದ್ದಾರೆ.

ತಮ್ಮ ಸಮುದಾಯದ ಏಳಿಗೆಗೆ ಅಸಾಧಾರಣ ಸೇವೆ ಸಲ್ಲಿಸಿದ 40 ವಯಸ್ಸಿನೊಳಗಿನ ವಿಶ್ವದಾದ್ಯಂತದ ಹತ್ತು ವ್ಯಕ್ತಿಗಳಿಗೆ ಪ್ರತೀ ವರ್ಷ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ ಎಂದು ಹೇಳಿಕೆ ತಿಳಿಸಿದೆ. ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ ಎಂದೂ ಹೇಳಿಕೆ ತಿಳಿಸಿದೆ. ಜೆಸಿಐ ವಿಶ್ವಸಂಸ್ಥೆಯ ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತಿದ್ದು. ಸಾರ್ವಜನಿಕ ಆರೋಗ್ಯ ಮತ್ತು ವೈದ್ಯಕೀಯ ರಂಗದ ಹೊಸ ಜ್ಞಾನವನ್ನು ಬಳಸುವ ಮೂಲಕ ಜಾಗತಿಕ ಸಮುದಾಯಕ್ಕೆ ಸಲ್ಲಿಸಿದ ಸೇವೆಗಾಗಿ ಗಿಫ್ಟಿ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ. ಗಿಫ್ಟಿ ಅವರು ಹಾರ್ವರ್ಡ್ ಸೇರಿದಂತೆ ವಿವಿಧ ವಿವಿಗಳಲ್ಲಿ ಅಧ್ಯಯನ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.