ಭಾನುವಾರ, ಜೂನ್ 13, 2021
22 °C

ಭಾರತ, ಸಿಂಗಪುರಕ್ಕೆ ವಿಶ್ವಸಂಸ್ಥೆಯ ‘ಜೀವಜಲ’ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ಟೋಕಿಯೊ (ಐಎಎನ್‌ಎಸ್‌): ಜಲ ಸಂಪನ್ಮೂಲಗಳ ಸಮರ್ಥ ಬಳಕೆ ಹಾಗೂ ನಿರ್ವಹಣೆಗಾಗಿ  ಭಾರತ ಮತ್ತು ಸಿಂಗಪುರ ವಿಶ್ವಸಂಸ್ಥೆಯ 2014ರ ‘ಅತ್ಯುತ್ತಮ ಜೀವಜಲ ನಿರ್ವಹಣೆ’ ಪ್ರಶಸ್ತಿಗೆ ಭಾಜನವಾಗಿವೆ.



ಮಾರ್ಚ್‌ 22ರ ವಿಶ್ವ ಜಲ ದಿನಾಚರಣೆ ಸಂದರ್ಭದಲ್ಲಿ ಶುಕ್ರವಾರ ವಿಶ್ವಸಂಸ್ಥೆ ಈ ಪ್ರಶಸ್ತಿ­ಯನ್ನು ಘೋಷಿಸಿದೆ.‘ಈ ಬಾರಿ ಪ್ರಶಸ್ತಿಗೆ ಭಾಜನರಾ­ಗಿರುವ ಈ ಎರಡು ದೇಶಗಳು ಭವಿಷ್ಯದಲ್ಲಿ ನೀರಿನ ಸಂಪನ್ಮೂಲಗಳ ಸಮರ್ಥ ಬಳಕೆಗೆ ಅತ್ಯುತ್ತಮ ಉದಾಹ­ರಣೆಗಳು’ ಎಂದು ವಿಶ್ವ­ಸಂಸ್ಥೆಯ ಜಲ ವಿಭಾಗದ ಮೈಕೆಲ್ ಜರೌದ್‌ ಪ್ರಶಂಸೆ ಮಾಡಿದ್ದಾರೆ.



ಪ್ರತಿ ವರ್ಷವೂ ವಿಶ್ವ ಜಲ ದಿನಾಚರಣೆ ಪ್ರಯುಕ್ತ ವಿಶ್ವಸಂಸ್ಥೆ ನೀಡುವ ಜಲ ಪ್ರಶಸ್ತಿಯು ವಿಭಿನ್ನ ಉದ್ದೇಶವನ್ನು ಗುರಿಯಾಗಿರಿಸಿ­ಕೊಂಡಿರುತ್ತದೆ. ಈ ಬಾರಿ ನೀರಿನ ಸಂಪನ್ಮೂಲದ ಸಮರ್ಥ ಹಾಗೂ ಸಮರ್ಪಕ ನಿರ್ವಹಣೆ ಬಗ್ಗೆ ವಿಷಯ ಕೇಂದ್ರಿತವಾಗಿತ್ತು.  ಈ ಬಾರಿ ಪ್ರಶಸ್ತಿಗೆ ವಿವಿಧ ದೇಶಗಳಿಂದ ಒಟ್ಟು 34 ಅರ್ಜಿಗಳು ಬಂದಿದ್ದವು. ಅದರಲ್ಲಿ 9 ಅರ್ಜಿಗಳು ಏಷ್ಯಾದಿಂದ ಬಂದಿದ್ದವು ಎಂದು ವಿಶ್ವಸಂಸ್ಥೆಯ ಮೂಲಗಳು ತಿಳಿಸಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.