ಬೆಂಗಳೂರು: ಭಾರ್ತಿ ಆಕ್ಸಾ ಜನರಲ್ ಇನ್ಶುರೆನ್ಸ್ ಕಂಪೆನಿಯು 2011ರಲ್ಲಿ ಶೇ 47ರಷ್ಟು ಪ್ರಗತಿ ದಾಖಲಿಸಿದ್ದು, 6 ಲಕ್ಷಕ್ಕೂ ಹೆಚ್ಚಿನ ಪಾಲಿಸಿಗಳನ್ನು ಮಾರಾಟ ಮಾಡಿದೆ ಎಂದು ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಮರ್ನಾಥ್ ಅನಂತನಾರಾಯಣನ್ ತಿಳಿಸಿದರು.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಅವಧಿಯಲ್ಲಿ ಪ್ರೀಮಿಯಂ ಸಂಗ್ರಹವು ರೂ.528ಕೋಟಿಗಳಿಂದ ರೂ.776 ಕೋಟಿಗಳಿಗೆ ಏರಿಕೆಯಾಗಿದೆ. 10 ಪಾಲಿಸಿಗಳಿಗೆ 1ರಂತೆ ಮರು ಪಾವತಿ ಮಾಡಲಾಗಿದೆ. ವಾಹನ ಮತ್ತು ಆರೋಗ್ಯ ವಿಮೆ ಕ್ಷೇತ್ರಗಳು ಶೇ 70 ಮತ್ತು ಶೇ 18ರಷ್ಟು ಪ್ರಗತಿ ದಾಖಲಿಸಿವೆ ಎಂದರು.

ಆರೋಗ್ಯ ವಿಮೆಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕ್ಷೇತ್ರಕ್ಕೆ ಆದ್ಯತೆ ನೀಡಲಾಗಿದೆ. ಆಸ್ಪತ್ರೆ ಚಿಕಿತ್ಸಾ ವೆಚ್ಚ ಸೇರಿದಂತೆ ಸುಮಾರು 17ಕ್ಕೂ ಹೆಚ್ಚು ಸೌಲಭ್ಯಗಳಿರುವ `ಸ್ಮಾರ್ಟ್ ಆರೋಗ್ಯ ವಿಮೆ~ ಯೋಜನೆ ಜಾರಿಗೊಳಿಸಲಾಗಿದೆ ಎಂದರು.

2012ರಲ್ಲಿ ಗ್ರಾಮೀಣ ಮತ್ತು ಚಿಕ್ಕ ನಗರಗಳತ್ತ ಹೆಚ್ಚಿನ ಗಮನ ಹರಿಸುತ್ತಿದ್ದು, ಒಟ್ಟಾರೆ ಶೇ 40ರಷ್ಟು ವಹಿವಾಟು ಪ್ರಗತಿ ನಿರೀಕ್ಷಿಸಲಾಗಿದೆ ಎಂದು ಕಂಪೆನಿಯ ಮುಖ್ಯ ಹಣಕಾಸು ಅಧಿಕಾರಿ ಸಂಪತ್ ಕುಮಾರ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.