ಸೋಮವಾರ, ಜನವರಿ 20, 2020
17 °C

ಭಾವೈಕ್ಯ ಬಿಂಬಿಸಿದ ಸಾಂಸ್ಕೃತಿಕ ವೈಭವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಗಣರಾಜ್ಯೋತ್ಸವ ಸಮಾರಂಭಕ್ಕೆ ಬಹುತೇಕ ಜನಪ್ರತಿನಿಧಿಗಳ ಗೈರು ಹಾಜರಿ ಎದ್ದು ಕಾಣುತ್ತಿತ್ತು.

 ಜಿ.ಪಂ. ಅಧ್ಯಕ್ಷರ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಸದಸ್ಯರು ರೆಸಾರ್ಟ್‌ಗಳಿಗೆ ತೆರಳಿದ್ದರಿಂದ ಗೈರು ಹಾಜರಾಗಿದ್ದರು.  ಬಹುತೇಕ ನಗರಸಭೆ ಸದಸ್ಯರು ಹಾಗೂ ಸಂಸತ್ ಸದಸ್ಯ ಜನಾರ್ದನ ಸ್ವಾಮಿ ಸಮಾರಂಭಕ್ಕೆ ಗೈರು ಹಾಜರಾಗಿದ್ದರು.  ಸಾರ್ವಜನಿಕರ ಸಂಖ್ಯೆಯೂ ವಿರಳವಾಗಿತ್ತು. ಒಟ್ಟಿನಲ್ಲಿ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಗಣರಾಜ್ಯೋತ್ಸವ ಸಂಭ್ರಮ ಕಳೆದುಕೊಂಡು ಸೊರಗಿತ್ತು.

ಸಮಾರಂಭಕ್ಕೆ ನಗರದ ಮಿಲತ್ ಶಾಲೆಯೊಂದರ ಮಕ್ಕಳನ್ನು ಲಾರಿಯಲ್ಲಿ ಕರೆದಿದ್ದರಿಂದ ಸಾರಿಗೆ ಪ್ರಾದೇಶಿಕ ಅಧಿಕಾರಿಗಳು ದಂಡ ಹಾಕಿದರು.

ಪ್ರತಿಕ್ರಿಯಿಸಿ (+)