ಭಾನುವಾರ, ಫೆಬ್ರವರಿ 28, 2021
31 °C
ಕಲಾಪ

ಭಾವ–ಸ್ವಭಾವಕ್ಕೆ ಚೌಕಟ್ಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾವ–ಸ್ವಭಾವಕ್ಕೆ ಚೌಕಟ್ಟು

ಅಲ್ಲಿನ ಹಲವು ಚಿತ್ರಕಾರರ ಕುಂಚದಲ್ಲಿ  ಅರಳಿದ ಒಂದೊಂದು ಚಿತ್ರವೂ ಒಂದೊಂದು ಕಥೆಯನ್ನು ಸಾರುತ್ತಿತ್ತು.  ಮಾನವ, ಪರಿಸರ, ಹೊಲ–ಗದ್ದೆ, ಪ್ರಾಣಿಗಳು, ಪುರಾಣ ಕಥೆಗಳನ್ನು ಸಾರುವ ಚಿತ್ರಗಳು ಹೀಗೆ ಹಲವು ವಿಭಿನ್ನತೆಯಲ್ಲಿ ಏಕತೆಯನ್ನು ಸಾರಿದ್ದವು..ಪರಿಸರದೊಂದಿಗೆ ಮಾನವನ ಹೋರಾಟ, ಕಾಮಧೇನು ಹಾಗೂ ಮನುಷ್ಯನ ನಡುವಿನ ಬಾಂಧವ್ಯ ಈ  ಎಲ್ಲಾ ಅಂಶಗಳನ್ನು ಕಲೆಯಲ್ಲಿ ಸೆರೆ ಹಿಡಿದವರು  ಈ ಚಿತ್ರಕಾರರು.ಈ  ಚಿತ್ರಗಳು ಪ್ರದರ್ಶಿತವಾಗಿದ್ದು ನಗರದ ರೇಸ್‌ಕೋರ್ಸ್‌ ರಸ್ತೆಯಲ್ಲಿನ ಮೆಟಿರಿಯಲ್ ಮೋಟಾರ್ಸ್‌ನ ವೋಲ್ವೋ ಷೋ ರೂಂನಲ್ಲಿ, ‘ಕಾಸು ಫೌಂಡೇಶನ್‌’ ಆಯೋಜಿಸಿದ್ದ ಆರ್ಟ್‌ ಫಾರ್‌ ಕಾಸ್ ಚಿತ್ರಕಲಾ ಪ್ರದರ್ಶನದಲ್ಲಿ . ದೇಶದ ವಿವಿಧ ರಾಜ್ಯಗಳ ಕಲಾವಿದರ ಕಲಾಕುಂಚದಲ್ಲಿ ಅರಳಿದ ಚಿತ್ರಗಳು ಇಲ್ಲಿ ಪ್ರದರ್ಶನಗೊಂಡಿದ್ದವು.ಜೂನ್‌ 29ರವರೆಗೆ ನಡೆಯುವ ಈ ಚಿತ್ರಕಲಾ ಪ್ರರ್ದಶನದಲ್ಲಿ ರಮೇಶ್‌ ಗೋರ್ಜಾಲಾ, ಗಂಗಾಧರ್ ಶಿಂಧೆ, ಶಮಾ ಮುಖರ್ಜಿ, ಮರೆಡು ರಾಮು, ಫಕೀರ್‌ ತಾಮಕನಾಥ್‌, ಜ್ಯೋತಿ ಭಟ್‌, ಟೈಲರ್‌ ಶ್ರೀನಿವಾಸ್‌, ಪ್ರವೀಣ್‌ ಉಪಾಧ್ಯಾಯ, ಭರತ್‌ ಯಾದವ್, ಲಕ್ಷ್ಮಣ್‌ ಐಲೆ ಜೈಪ್ರಕಾಶ್‌, ಸರಸ್ವತಿ ಎಲ್‌, ಗದ್ದಂ ಮದಿಲೇಟಿ, ಮಸೂರಂ ರವಿಕಾಂತ್‌, ಅಜೀಜ್‌, ವೈಕುಂಠಂ, ಸಾಯಿ ಪೋತರ್ಲ ಮುಂತಾದ ಕಲಾವಿದರ ಚಿತ್ರಗಳು ಪ್ರದರ್ಶಿತವಾಗಿದ್ದವು. ‌ಈ ಚಿತ್ರಕಲಾ ಪ್ರದರ್ಶನದಲ್ಲಿ ಮಾರಾಟವಾದ ಚಿತ್ರದ ಹಣವನ್ನು ಸಂಗ್ರಹಿಸಿ ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ನಿರತವಾದ ಸರ್ಕಾರೇತರ ಸಂಸ್ಥೆ ಧ್ಯಾನ್‌ ಫೌಂಡೇಶನ್‌ಗೆ ದೇಣಿಗೆ ರೂಪದಲ್ಲಿ ನೀಡುತ್ತಿರುವುದು ಈ ಪ್ರದರ್ಶನದ ಇನ್ನೊಂದು ವಿಶೇಷ.  ವಾಟರ್‌ ಕಲರ್‌, ಆಯಿಲ್‌, ಆ್ಯಕ್ರಿಲಿಕ್‌ ವಿವಿಧ ರೀತಿಯ ಚಿತ್ರಕಲೆಗಳನ್ನು ಈ ಪ್ರದರ್ಶನದಲ್ಲಿ ಕಾಣಬಹುದಾಗಿದೆ.

ಸ್ಥಳ: ವೋಲ್ವೋ ಷೋ ರೂಂ, ಮೆಟಿರಿಯಲ್‌ ಮೋಟಾರ್ಸ್‌, ನಂ.34 ರೇಸ್‌ಕೋರ್ಸ್‌ ರಸ್ತೆ.‌

ಸಮಯ: ಬೆಳಿಗ್ಗೆ 11ರಿಂದ ರಾತ್ರಿ 8.30.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.