ಬೈಂದೂರು: ಕರ್ನಾಟಕದಲ್ಲಿ ಕೊಂಕಣಿಯ 41 ಪ್ರಕಾರಗಳನ್ನು ಮಾತೃಭಾಷೆಯಾಗಿ ಹೊಂದಿರುವ ಸಮುದಾಯಗಳಿವೆ. ಇವರ ಭಾಷಾ ಪ್ರೇಮ ಅನನ್ಯ. ಸ್ವಭಾಷಿಕರೊಡನೆ ಯಾವುದೇ ಹಿಂಜರಿಕೆಯಿಲ್ಲದೆ ತಮ್ಮ ಭಾಷೆಯಲ್ಲಿ ವ್ಯವಹರಿಸುವ ಇವರು ಭಾಷೆಯ ಮೂಲಕ ಬಾಂಧವ್ಯ ಸಾಧಿಸುವ ವಿಚಾರದಲ್ಲಿ ಮಾದರಿಯಾಗಿದ್ದಾರೆ ಎಂದು ಬಂದರು ಮತ್ತು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ಉಪ್ಪುಂದದ ರಂಗ ತರಂಗ ಜಂಟಿಯಾಗಿ ಖಂಬದಕೋಣೆಯ ನಿರ್ಮಲಾ ಸಭಾಭವನದಲ್ಲಿ ಈಚೆಗೆ ಆಯೋಜಿಸಿದ್ದ ಪ್ರಥಮ ಪ್ರಾದೇಶಿಕ ಕೊಂಕಣಿ ನಾಟಕೋತ್ಸವ ಹಾಗೂ `ರಂಗ ವೈಭವ-2012~ ಅನ್ನು ಈಚೆಗೆ ಉದ್ಘಾಟಿಸಿ ಅವರು ಮಾತನಾಡಿದರು.

ಕೊಂಕಣಿ ಭಾಷಿಕರು ನಯ, ನಾಜೂಕಿಗೆ ಹೆಸರಾದ ಸುಸಂಸ್ಕೃತರು. ತಾಳ್ಮೆ, ಕ್ರಿಯಾಶೀಲತೆ, ಅನ್ಯರನ್ನು ಗುರುತಿಸುವ, ಗೌರವಿಸುವ ಗುಣ ಅವರ ಹೆಗ್ಗುರುತು. ಕೊಂಕಣಿ ಸಾಹಿತ್ಯ ಅಕಾಡೆಮಿ ಎಲ್ಲ ಪ್ರಕಾರಗಳ ಕೊಂಕಣಿ ಭಾಷಿಕರನ್ನು ಒಂದು ವೇದಿಕೆಗೆ ತಂದು ಅವರ ಭಾಷೆ, ಸಂಸ್ಕೃತಿಯನ್ನು ಬೆಳೆಸುವ, ಅನ್ಯರಿಗೆ ಪರಿಚಯಿಸುವ ಕೆಲಸ ಮಾಡಲಿ. ಅದಕ್ಕೆ ಸರ್ಕಾರದ ನೆರವು ದೊರಕಿಸಲು ಶ್ರಮಿಸುವೆ ಎಂದು ಅವರು ಆಶ್ವಾಸನೆಯಿತ್ತರು.

ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿಯ ಅಧ್ಯಕ್ಷ ಕಾಸರಗೋಡು ಚಿನ್ನಾ ಅಕಾಡೆಮಿಯನ್ನು ಕ್ರಿಯಾಶೀಲಗೊಳಿಸಿ ರಾಜ್ಯದ ಎಲ್ಲೆಡೆ ಹರಡಿರುವ ಕೊಂಕಣಿ ಭಾಷಿಕರನ್ನು ಪರಸ್ಪರ ಬೆಸೆಯುವ ಕೆಲಸಕ್ಕೆ ಈಗಾಗಲೆ ಚಾಲನೆ ನೀಡಲಾಗಿದೆ. `ಮನೆಮನೆಗೆ ಕೊಂಕಣಿ~ ಕಾರ್ಯಕ್ರಮದ ಮೂಲಕ ಸಮು ದಾಯದಲ್ಲಿ ಕೊಂಕಣಿ ಭಾಷೆ ಮತ್ತು ಸಂಸ್ಕೃತಿಯ ಕುರಿತಾದ ಜಾಗೃತಿ ಹುಟ್ಟಿಸುವ ಕಾರ್ಯ ಆರಂಭವಾಗಿದೆ ಎಂದರು.

ಶಾಸಕ ಕೆ.ಲಕ್ಷ್ಮೀನಾರಾಯಣ ಕೊಂಕಣಿಗರನ್ನು ಅನ್ಯರು ಸ್ನೇಹದಿಂದ ಕಾಣಲು ಅವರ ಸರಳ ನಡೆನುಡಿ ಕಾರಣ ಎಂದು ಹೇಳಿದರು. ಉಡುಪಿ ಎಪಿಎಂಸಿ ಅಧ್ಯಕ್ಷ ಕುಯಿಲಾಡಿ ಸುರೇಶ ನಾಯಕ್, ಕುಂದಾಪುರ ಪುರಸಭಾಧ್ಯಕ್ಷ ಮೋಹನದಾಸ್ ಶೆಣೈ ಅತಿಥಿಗಳಾಗಿದ್ದರು.

ಚಾರ್ಟರ್ಡ್ ಅಕೌಂಟಂಟ್ ಯು.ರಾಮಚಂದ್ರ ಪ್ರಭು, ಬೈಂದೂರು ಹೋಲಿಕ್ರಾಸ್ ಚರ್ಚ್ನ ಧರ್ಮಗುರು ಫ್ರಾನ್ಸಿಸ್ ಕರ್ನೇಲಿಯೊ ಶುಭ ಹಾರೈಸಿದರು.

ಆಕಾಶವಾಣಿ ಮತ್ತು ದೂರದರ್ಶನ ಸಂಗೀತ ಕಲಾವಿದೆ ಪ್ರಮೀಳಾ ಕುಂದಾಪುರ ಮತ್ತು ಕೊಂಕಣಿ ಸಾಹಿತಿ, ನಾಟಕಕಾರ ಬರ್ನಾರ್ಡ್ ಜೆ.ಕೋಸ್ಟಾ ಅವರನ್ನು ಸನ್ಮಾನಿಸಲಾಯಿತು.

ರಂಗ ತರಂಗದ ಸಂಚಾಲಕ ಓಂ ಗಣೇಶ್ ಉಪ್ಪುಂದ ಸ್ವಾಗತಿಸಿದರು. ಅಕಾಡೆಮಿಯ ರಿಜಸ್ಟ್ರಾರ್ ಡಾ. ದೇವದಾಸ ಪೈ ವಂದಿಸಿದರು.

ಅಕಾಡೆಮಿ ಸದಸ್ಯರಾದ ಚಿದಾನಂದ ಭಂಡಾರಿ, ರೋಯ್ ಕ್ಯಾಸ್ಟಲೀನೊ, ಅಶೋಕ ಶೇಟ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ನಾಟಕ ಪ್ರದರ್ಶನ: ಉದ್ಘಾಟನೆಗೆ ಮುನ್ನ ಬೈಂದೂರು ಹೋಲಿ ಕ್ರಾಸ್ ಚರ್ಚ್ ಕಲಾವಿದರು ಮಾರ್ಟಿನ್ ಎವರೆಸ್ಟ್ ನಿರ್ದೇಶಿತ `ಸ್ವಾರ್ಥಿ ಸಂಸಾರು~ ಮತ್ತು ಉದ್ಘಾಟನೆಯ ಬಳಿಕ ನಾಯ್ಕನಕಟ್ಟೆ ವೆಂಕಟರಮಣ ಸೇವಾ ಸಮಿತಿಯ ಸದಸ್ಯರು ಯು. ಶ್ರೀನಿವಾಸ ಪ್ರಭು ನಿರ್ದೇಶನದ `ಘಡೇ ಏಕ್ ಫಟ್ಟೀಕ್~ ನಾಟಕಗಳನ್ನು ಪ್ರದರ್ಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.