ಭಾನುವಾರ, ಜನವರಿ 26, 2020
25 °C

ಭೀಮಾತೀರದಲ್ಲಿ ಚಲನಚಿತ್ರದ ಚಿತ್ರೀಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೂಡಲಸಂಗಮ: ವಿಶ್ವಗುರು ಬಸವಣ್ಣ ನವರ ಐಕ್ಯ ಸ್ಥಳವಾದ ಕೂಡಲಸಂಗ ಮದಲ್ಲಿ ಮಧ್ಯಾಹ್ನ 2 ರಿಂದ 4 ಗಂಟೆ ಯವರೆಗೆ ಭೀಮಾತೀರದಲ್ಲಿ ಚಲನ ಚಿತ್ರದ ಚಿತ್ರೀಕರಣ ನಡೆಯಿತು. ಕೂಡಲ ಸಂಗಮದ ಶರಣ ಮೇಳಕ್ಕೆ ಆಗಮಿಸಿದ ಭಕ್ತರು ಭಾರಿ ಸಂಖ್ಯೆಯಲ್ಲಿ ಚಿತ್ರಿಕರಣ ವೀಕ್ಷಿಸಲು ಕೂಡಲ ಸಂಗಮದ ಸಂಗಮೇಶ್ವರ ದೇವಾಲಯದ ಆವರಣ ದಲ್ಲಿ ಸೇರಿದರು. ನಾಯಕ ನಟ ವಿಜಯ್, ನಟಿ ವಿಣಿತಾ, ನಿರ್ಮಾಪಕ ಅನಜಿ ನಾಗರಾಜ, ನಿರ್ದೇಶಕ ಓಂ ಪ್ರಕಾಶ್, ತಂತ್ರಜ್ಞ ವಿನುಮೂರ್ತಿ, ಸಹ ನಟರಾದ ರಾಮ ಪುರೋಹಿತ, ಶಂಕರ ಪಾಟೀಲ, ಭರತ ರೆಡ್ಡಿ, ಶುಚೇಂದ್ರ ಪ್ರಸಾದ, ಶರತ್, ಲೋಕೇಶ, ಲೋಕ ನಾಥ ಚಿತ್ರೀಕರಣದಲ್ಲಿ ಭಾಗವಹಿಸಿ ದರು. ಜಾತ್ರೆಯಲ್ಲಿ ಖಳನಾಯಕನನ್ನು ಕೊಲ್ಲುವ ದೃಶ್ಯವನ್ನು ಇಲ್ಲಿ ಚಿತ್ರೀಕರಿ ಸಲಾಯಿತು.ನಿರ್ಮಾಪಕ ಅನಜಿ ನಾಗರಾಜ ಸುದ್ದಿಗಾರರೊಂದಿಗೆ ಮಾತನಾಡಿ, ಚಿತ್ರೀಕರಣದ ಕಾರ್ಯ ಶೇ 90 ರಷ್ಟು ಪೂರ್ಣಗೊಂಡಿದೆ. ಉಳಿದ ಭಾಗದ ಚಿತ್ರೀಕರಣವನ್ನು ಇನ್ನು ಒಂದು ವಾರದಲ್ಲಿ ಮಾಡಿ ಮುಗಿಸಲಾಗುವುದು ಎಂದು ಹೇಳಿದರು.ಫೆಬ್ರುವರಿ ಅಂತ್ಯಕ್ಕೆ ಅಥವಾ ಮಾರ್ಚ ಮೊದಲ ವಾರದಲ್ಲಿ ಈ ಚಿತ್ರ ಬಿಡುಗಡೆ ಗೊಳ್ಳಲಿದ್ದು. ಚಿತ್ರಿಕರಣ ಬಹುತೇಕ ಉತ್ತರ ಕರ್ನಾಟಕದ ಮನ್ನಿಕಟ್ಟಿ, ಕೂಡಲಸಂಗಮ, ಕರಕಲಮಟ್ಟಿ, ಬಾಗಲಕೋಟೆ, ಜಮ ಖಂಡಿ, ಸವದತ್ತಿ, ದಾಂಡೇಲಿ ಹಾಗೂ ಬೆಂಗಳೂರು, ಮೈಸೂರು ಭಾಗದಲ್ಲಿ ಮಾಡಲಾಗಿದೆ. ಭೀಮಾತೀರದಲ್ಲಿ ನಡೆದ ನೈಜ ಘಟನೆ ಯನ್ನು ತೆರೆಯ ಮೇಲೆ ತರುವಂತಹ ಕಾರ್ಯವನ್ನು ಮಾಡಲಾಗುತ್ತಿದೆ. ಚಿತ್ರೀಕರಣದ ಸಂದರ್ಭದಲ್ಲಿ ಎಲ್ಲ ಭಾಗದ ಜನರು ನಮಗೆ ಸಹಕಾರ ನೀಡಿದರು ಎಂದು ತಿಳಿಸಿದರು. ಚಿತ್ರೀಕರಣಕ್ಕೆ ಉತ್ತರ ಕರ್ನಾಟಕದ ಬಹುತೇಕ ಸ್ಥಳಗಳು ಯೋಗ್ಯವಾಗಿವೆ. ಸಂಪೂರ್ಣ ಈ ಚಿತ್ರವನ್ನು ಕರ್ನಾಟಕ ದಲ್ಲಿಯೇ ಚಿತ್ರೀಕರಿಸಲಾಗಿದೆ ಎಂದು ಹೇಳಿದರು.ಚಿತ್ರ ನಟ ದುನಿಯಾ ವಿಜಯ ಸುದ್ದಿಗಾರರೊಂದಿಗೆ ಮಾತನಾಡಿ ಉತ್ತರ ಕರ್ನಾಟಕದ ಎಲ್ಲ ಸ್ಥಳಗಳ ಲ್ಲಿಯೂ ಚಿತ್ರೀಕರಣ ಮಾಡಿದ್ದು ತುಂಬಾ ಖುಷಿಯಾಗಿದೆ. ನೈಜ್ಯ ಘಟನೆಯ ಚಿತ್ರದಲ್ಲಿ ನಟಿಸುತ್ತಿರು ವುದಕ್ಕೆ ಸಂತೋಷವಾಗುತ್ತಿದೆ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)