ಶನಿವಾರ, ಏಪ್ರಿಲ್ 10, 2021
30 °C

ಭೂತನಕಾಡು: ಕಿಶೋರಿಯರ ದಿನಾಚರಣೆ :ಹದಿಹರೆಯದಲ್ಲಿ ಜಾಗೃತಿ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭೂತನಕಾಡು (ಮೂಡಿಗೆರೆ): ಹದಿಹರೆಯ ಜೀವನದ ಪ್ರಮುಖ ಬದಲಾವಣೆಯ ಕಾಲವಾಗಿದ್ದು, ಈ ವಯಸ್ಸಿನಲ್ಲಿ ಜಾಗೃತಿ ಅವಶ್ಯ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಯೋಗೇಶ್ ಹೇಳಿದರು.ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಭೂತನಕಾಡು, ತೋಳೂರು ಗಂಗಾಭವಾನಿ ಅಂಗನವಾಡಿ ಮತ್ತು ಮಾಚಗೊಂಡನ ಹಳ್ಳಿ ವೃತ್ತ ಕೇಂದ್ರಗಳು ಗುರುವಾರ ಏರ್ಪಡಿಸಿದ್ದ ಕಿಶೋರಿಯರ ದಿನಾಚರಣೆ ಮತ್ತು ಮಕ್ಕಳ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.ಹದಿಹರೆಯದಲ್ಲಿ ದೇಹದಲ್ಲಿ ಜೈವಿಕ ಗ್ರಂಥಿಗಳ ಉತ್ಪಾದನೆಯಿಂದ ಆಗುವ ಬದಲಾವಣೆಗೆ ಭಯಭೀತರಾಗದೇ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಮಾಹಿತಿ ಮತ್ತು ಚಿಕಿತ್ಸೆ ಪಡೆಯಬೇಕು. ಸರ್ಕಾರ ಹದಿ ಹರೆಯದವರಿಗಾಗಿಯೇ ಜಾರಿಗೆ ತಂದಿರುವ ಯೋಜ ನೆಯ ಲಾಭ ಪಡೆಯಬೇಕು ಎಂದು ಹೇಳಿದರು.ಮಾಚಗೊಂಡಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ಮನೋಜ್ ಸಾಲ್ಡಾನ ಮಾತ ನಾಡಿ, ಆರೋಗ್ಯ ಕೇಂದ್ರಗಳಲ್ಲಿ ಪ್ರತಿ ಗುರುವಾರ ಮಧ್ಯಾಹ್ನದ ನಂತರ ಹದಿಹರೆಯದವರಿಗೆ ಮಾಹಿತಿ ಮತ್ತು ಚಿಕಿತ್ಸೆ ನೀಡುವುದಕ್ಕಾಗಿಯೇ ಸಮಯವನ್ನು ಮೀಸಲಿಟ್ಟಿದ್ದು, ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.ನಂದೀಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ದೇವಕಿ, ಪೋಷಕಾಂಶಯುಕ್ತ ಆಹಾರದ ಪ್ರಾತ್ಯಕ್ಷಿಕೆ ಮತ್ತು ಮಾಹಿತಿ ನೀಡಿದರು. ಶಿಶು ಅಭಿವೃದ್ಧಿ ಇಲಾಖೆಯ ವೃತ್ತ ಮೇಲ್ವಿಚಾರಕಿ ಅನುರಾಧ, ಅಂಗನ ವಾಡಿಗಳಲ್ಲಿ ಕಿಶೋರಿಯರಿಗೆ ಮತ್ತು ಮಹಿಳೆಯರಿಗೆ ನೀಡುವ ಸವಲತ್ತುಗಳ ಬಗ್ಗೆ ಮಾತನಾಡಿದರು.ಕಾರ್ಯಕ್ರಮದಲ್ಲಿ ತೋಳೂರುಗುಡ್ಡ ಅಂಗನವಾಡಿ ಮಕ್ಕಳು ಧರಿಸಿದ್ದ ಛದ್ಮವೇಷ ಆಕರ್ಷಕವಾಗಿತ್ತು. ಸಮಾರಂಭದಲ್ಲಿ ಭೂತನಕಾಡು, ತೋಳೂರು ಗುಡ್ಡ, ಮಾಚಗೊಂಡನಹಳ್ಳಿ ಗ್ರಾಮಗಳ ನೂರಾರು ಕಿಶೋರಿಯರು ಭಾಗವಹಿಸಿ ವೈದ್ಯರೊಂದಿಗೆ ಸಂವಾದ ನಡೆಸಿ ಮಾಹಿತಿ ಪಡೆದರು. ಕಿಶೋರಿಯರಿಗೆ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.ಸಮಾರಂಭದಲ್ಲಿ ಸತ್ತಿಗನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಪುಟ್ಟೇಗೌಡ, ಸದಸ್ಯರಾದ ಇಸಾಕ್, ಜಯ, ಶಾಲಾ ಮುಖ್ಯ ಶಿಕ್ಷಕ ಶಿವಣ್ಣ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎನ್. ರಝೀ, ಮಹಿಳಾ ಆರೋಗ್ಯ ಸಂದರ್ಶಕಿ ದೇವಕಿ, ರುಕ್ಸಾನ ಭಾನು, ತೋಳೂರು ಗುಡ್ಡ ಅಂಗನವಾಡಿ ಕಾರ್ಯಕರ್ತೆ ಎಂ.ತುಳಸಿ, ಅಬ್ಸಾ, ಅನುರಾಧ ಮತ್ತಿತರರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.