ಗುರುವಾರ , ಏಪ್ರಿಲ್ 22, 2021
29 °C

ಭೂಮಿ ಸಕ್ರಮ, ಪಟ್ಟಾ ನೀಡಿಕೆಗೆ ರೈತರ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಗ್ಗಾವಿ: ಕೃಷಿ ಸಾಗುವಳಿ ಮಾಡುತ್ತಿ ರುವ ಭೂಮಿಯನ್ನು ಸಕ್ರಮಗೊಳಿಸಿ ಪಟ್ಟಾ ನೀಡಬೇಕೆಂದು ಆಗ್ರಹಿಸಿ ಪಟ್ಟಣದ ತಹಶೀಲ್ದಾರ ಕಚೇರಿ ಎದುರಿಗೆ ಭಾನುವಾರ ತಾಲ್ಲೂಕಿನ ಬಸವನಕೊಪ್ಪ ಗ್ರಾಮದ ನೂರಾರು ರೈತರು ನಿರಂತರ ಉಪವಾಸ ಸತ್ಯಾಗ್ರಹ  ನಡೆಸಿದ್ದಾರೆ.ಸುಮಾರು 30 ವರ್ಷಗಳಿಂದ ಅಕ್ರಮವಾಗಿ ಕೃಷಿ ಸಾಗುವಳಿ ಮಾಡುತ್ತಾ ಬಂದಿರುವ ಜಮೀನನ್ನು ಸರ್ಕಾರ ತಕ್ಷಣ ಸಕ್ರಮಗೊಳಿಸಿ ಪಟ್ಟಾ ನೀಡಬೇಕು. ತಾಲೂಕಿನ ಬಸವನಕೊಪ್ಪ ಗ್ರಾಮದ ಸುಮಾರು 360 ಎಕ್ಕರೆ ಜಮೀನನ್ನು ಸಾಗುವಳಿ ಮಾಡುತ್ತಿದ್ದು, ಸರ್ಕಾರ ಮಾತ್ರ ಈ ವರೆಗೆ ಇಲ್ಲಿನ ಕೃಷಿ ರೈತರ ಬಗ್ಗೆ ಗಮನ ಹರಿಸುತ್ತಿಲ್ಲ.

 

ಇಲ್ಲಿನ ನೂರಾರು ಬಡರೈತ ಸಮೂಹ  ಸುಮಾರು ವರ್ಷಗಳಿಂದ ಕೃಷಿಗಾಗಿ ಕೂಲಿಯನೇ ನಂಬಿಕೊಂಡು ಬದು ಕುತ್ತಿದ್ದಾರೆ. ಕಲ್ಲು, ಗುಡ್ಡದ ಪ್ರದೇಶ ವನ್ನು ಶ್ರಮವಹಿಸಿ ಫಲಭರಿತ ಪ್ರದೇಶವನ್ನಾಗಿ ರೂಪಿಸಿದೆ. ಆದರೆ ಸರ್ಕಾರ ಅಕ್ರಮ ಸಾಗುವಳಿ  ಮಾಡುತ್ತಾ ಬಂದಿರುವ ಭೂಮಿಯನ್ನು ಕೂಡಲೆ  ಕೃಷಿ  ಸಾಗುವಳಿ ಮಾಡುತ್ತಿರುವ ರೈತರ ಹೆಸರಿಗೆ ಭೂಮಿಯ ಪಟ್ಟಾ ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.ಮಾಜಿ ಶಾಸಕ ಸೈಯದ್ ಅಜ್ಜಂಪೀರ ಖಾದ್ರಿ  ಪ್ರತಿಭಟನಾ ನಿರತ ರೈತರ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿ ಅವರು ಮಾತನಾಡಿ, ರೈತರ ಹೆಸರಿನಲ್ಲಿ ಆಡಳಿತಕ್ಕೆ ಬಿಜೆಪಿ ಸರ್ಕಾರ ರೈತರಿಗೆ ಮೋಸ ಮಾಡುತ್ತಿದೆ.

ಹೀಗಾಗಿ ರೈತರ ಶಾಪ್ ತಟ್ಟದೆ ಬಿಡಲಾರದು. ರಾಜ್ಯದ ರೈತ ಸಮೂಹ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಸರ್ಕಾರ ಕುರ್ಚಿಗಾಗಿ ಕಾದಾಟ ನಡೆಸಿದ್ದಾರೆ. ಹೀಗಾಗಿ  ರಾಜ್ಯದ ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ.ಕಳೆದ ಎರಡು ತಿಂಗಳಿಂದ ಮಳೆ ಬಾರದೆ ಬರಗಾಲ ಅನುಭವಿಸುತ್ತಿರುವ ರಾಜ್ಯದ ರೈತರು ತೀವೃ ಸಂಕಷ್ಟ ಎದುರಸತ್ತಿದ್ದಾರೆ. ಆದರೆ ಬಿಜೆಪಿ ಮುಖಂಡರು ಇದ್ದಾವುದೆ ತಿಳಿದೆ ಬೆಂಗಳೊರು ಮಟ್ಟಣದಲ್ಲಿ ಮೋಜು- ಮಜಾ ನಡೆಸಿದ್ದಾರೆ. ಅವರಿಗೆ ಆಡಳಿ ನಡೆಸಲು ಕುರ್ಚಿ ಬೇಕು ವಿನಃ ರೈತನ ಸಮಸ್ಯೆಗಳು ಬೇಡವಾಗಿದೆ. ಅಂತಹ ಸರ್ಕಾರಕ್ಕೆ ಬರಲಿರುವ ದಿನಗಳಲ್ಲಿ ರೈತ ಸಮೂಹವೇ ತಕ್ಕ ಪಾಠ ಕಲಿಸಲಿದೆ ಎಂದು ಪರೋಕ್ಷವಾಗಿ ಸಚಿವರ ವಿರೋಧ ಆಕ್ರೋಶ ವ್ಯಕ್ತಪಡಿಸಿದರು.ಇಬ್ಬರ ಸ್ಥಿತಿ ಗಂಭೀರ 

ಸುಮಾರು ಮೂರು ದಿನದಿಂದ ನಿರಂತರ ಉಪವಾಸ ಸತ್ಯಾಗ್ರಹದಲ್ಲಿ ನಿರತರಾದವರಲ್ಲಿ ಗಹೊನ್ನಪ್ಪ ಯಲವಿಗಿ, ಯಲ್ಲಪ್ಪ ಹರಿಜನ ಎಂಬುವರು ಶನಿವಾರ ರಾತ್ರಿ ಪ್ರಜ್ಞಾಹಿನರಾದ ಕಾರಣ ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ರೈತನ ಆತ್ಮಹತ್ಯೆ 

ನಿರಂತರ ಉಪವಾಸ ಸತ್ಯಾಗ್ರಹದಲ್ಲಿ ನಿರತನಾದ ಮಹಾದೇವಪ್ಪ ತಿರಕಪ್ಪ ಜಾಡರ (47) ಎಂಬುವರು ಶನಿವಾರ ಬಸನಕೊಪ್ಪ ಗ್ರಾಮದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಆದರೂ ಈವರೆಗೆ ಯಾವ ಅಧಿಕಾರಿಗಳು ನಮ್ಮ ಕಡೆ ಗಮನಿಸುತ್ತಿಲ್ಲ ಎಂದು ಪ್ರತಿಭಟನಾಕಾರ ರೈತರು ಆಕ್ರೋಶ ವ್ಯಕ್ತಪಡಿಸಿದರು.ರೈತರಾದ ಅನ್ವಸಾಬ ಮುಲ್ಲಾನವರ, ಹೊನ್ನಪ್ಪ ಯಲವಿಗಿ, ಬಾಬಾಸಾಬ ಮುಲ್ಲಾನವರ, ಪರಶುರಾಮ ಬಸವನಕೊಪ್ಪ, ಮುಕ್ತಮ್‌ಸಾಬ ಬಾಳಿಕಾಯಿ, ಯಲ್ಲಪ್ಪ ಹರಿಜನ, ಸಿದ್ದಪ್ಪ ವಿಠಲಾಪೂರ, ಅಕ್ಕಮ್ಮಾ ವಾಲೀಕಾರ, ನಾಗರಾಜ ಹಿರಳ್ಳಿ,, ಶಾಂತವ್ವ ಗಾಡದಾಳ, ಪ್ರಮಾ ಕಬನೂರ, ಯಲ್ಲವ್ವ ಪೂಜಾರ ಸೇರಿದಂತೆ ಅನೇಕ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ಬೆಂಬಲ: ಉತ್ತರ ಕರ್ನಾಟಕ ಕರವೇ ರಾಜ್ಯಾಧ್ಯಕ್ಷ ಹನುಮಂತ ಬಂಡಿವಡ್ಡರ, ಶ್ರೀರಾಮ ಸೇನಾ ಜಿಲ್ಲಾ ಕಾರ್ಯದರ್ಶಿ ಆನಂದ ದಾಸಪ್ಪನವರ, ಮಲ್ಲೇಶಪ್ಪ ಚೋಟೆಪ್ಪನವರ, ಬಿ.ಎಸ್.ಆರ್. ಕಾಂಗ್ರೆಸ್ ಪಕ್ಷದ ಮುಖಂಡ ಭೂಪಾಲ ಪಾಯಣ್ಣನವರ ಸೇರಿದಂತೆ ವಿವಿಧ ಸಂಘದ ಪದಾಧಿಕಾರಿಗಳು ರೈತರ ಸತ್ಯಾಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.