ಸೋಮವಾರ, ಆಗಸ್ಟ್ 10, 2020
25 °C

ಭೂಸ್ವಾಧೀನ : ಅಧಿಕಾರಿಗಳಿಗೆ ದಿಗ್ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭೂಸ್ವಾಧೀನ : ಅಧಿಕಾರಿಗಳಿಗೆ ದಿಗ್ಬಂಧನ

ನೆಲಮಂಗಲ: ತಾಲ್ಲೂಕಿನ ಮಾಚೋನಾಯಕನಹಳ್ಳಿ, ನರಸಿಂಹಯ್ಯನಪಾಳ್ಯ, ಅಹೋಬಲಪಾಳ್ಯದ ರೈತರ ಜಮೀನುಗಳನ್ನು ಗೃಹ ಮಂಡಳಿಯವರು ಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಿದ್ದು, ಈ ಸಂಬಂಧ ಸ್ಥಳ ಪರಿಶೀಲನೆಗಾಗಿ ಬಂದಿದ್ದ ಗೃಹಮಂಡಳಿ ಅಧಿಕಾರಿಗಳ ತಂಡಕ್ಕೆ ರೈತರು ದಿಗ್ಬಂಧನ ಹಾಕಿದ ಘಟನೆ ನಡೆದಿದೆ.ಗೃಹ ಮಂಡಳಿ ಸಹಾಯಕ ನಿರ್ದೆಶಕ ವೀರೇಂದ್ರನಾಥ್, ಕಾರ್ಯನಿರ್ವಹಣಾಧಿಕಾರಿ ಅರುಣ್‌ಕುಮಾರ್, ಎಂಜಿನಿಯರ್ ಗುರುಪ್ರಸಾದ್, ಭೂಸ್ವಾಧೀನಾಧಿಕಾರಿ ಶಿವಯ್ಯ, ಸರ್ವೇಯರ್ ಚೌಡಯ್ಯ ನೇತೃತ್ವದ ತಂಡ ಮಾಚೋನಾಯಕನಹಳ್ಳಿಯಲ್ಲಿ ಸ್ಥಳ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ಆಗಮಿಸಿತ್ತು. ಈ ವೇಳೆ ರೈತರು ದಿಗ್ಬಂದನ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.`ಈ ಹಿಂದೆ ಕೆಐಎಡಿಬಿ ಸ್ವಾಧೀನಪಡಿಸಿಕೊಂಡ 250 ಎಕರೆ ಜಮೀನಿಗೆ ಹೊಂದಿಕೊಂಡಿರುವ 350 ಎಕರೆ ಕೃಷಿ ಜಮೀನನ್ನು ಗೃಹ ಮಂಡಳಿಯವರು ಸ್ವಾಧೀನ ಪಡಿಸಿಕೊಳ್ಳಲು ನಿರ್ಧರಿಸಿದ್ದಾರೆ.

ಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಿರುವ ಪಕ್ಕದಲ್ಲೇ ರಿಯಲ್ ಎಸ್ಟೇಟ್ ಕಂಪೆನಿಗೆ ಸೇರಿದ 100 ಎಕರೆ ಜಮೀನಿದೆ. ಸ್ವಾಧೀನ ಪ್ರಕ್ರಿಯೆಯ ಹಿಂದೆ ಪ್ರಭಾವಿಗಳ ಕೈವಾಡವಿದೆ. ಇದರಿಂದ ರೈತರಿಗೆ ತೀವ್ರ ತೊಂದರೆಯಾಗಿದೆ. ಕೂಡಲೇ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡಬೇಕು' ಎಂದು ರೈತರು ಆಗ್ರಹಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.