ಭಾನುವಾರ, ಜನವರಿ 19, 2020
27 °C

ಭೂ ಕಬಳಿಕೆ:ಮತ್ತೊಬ್ಬ ಸಚಿವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 

ಚೆನ್ನೈ (ಐಎಎನ್ಎಸ್): ಭೂ ಕಬಳಿಕೆ ಆರೋಪದ ಮೇಲೆ ತಮಿಳು ನಾಡು ಪೊಲೀಸರು, ಹಿಂದಿನ ಡಿಎಂಕೆ ಪಕ್ಷದ  ಆಡಳಿತವಿದ್ದಾಗ ಸಚಿವರಾಗಿದ್ದ ಎಂ.ಪಿ. ಸಾಮಿನಾಥನ್ ಅವರನ್ನು ಸೋಮವಾರ ಬಂಧಿಸಿದ್ದಾರೆಂದು ಅಧಿಕೃತ ಮೂಲಗಳು ತಿಳಿಸಿವೆ.

ಹಿಂದಿನ ಡಿಎಂಕೆ ಸರ್ಕಾರದಲ್ಲಿ ಹೆದ್ದಾರಿ ಖಾತೆಯ ಸಚಿವರಾಗಿದ್ದ ಸಾಮಿನಾಥನ್ ಅವರನ್ನು ಇಲ್ಲಿಂದ 400 ಕಿ.ಮೀ ದೂರದ ತಿರುಪುರ್ ನಲ್ಲಿನ ಅವರ ಮನೆಯಲ್ಲಿ ಬಂಧಿಸಲಾಗಿದೆ.

ಜಯಲಲಿತಾ ನೇತೃತ್ವದ ಎಐಎಡಿಎಂಕೆ ಪಕ್ಷವು ಕಳೆದ ಸಾಲಿನ ಮೇ ತಿಂಗಳು ಅಧಿಕಾರಕ್ಕೆ ಬರುತ್ತಿದ್ದಂತೆಯೇ ಭೂ ಕಬಳಿಕೆ ಆರೋಪದ ಮೇಲೆ ಡಿಎಂಕೆ ಪಕ್ಷದ ಹಲವಾರು ಹಿರಿಯ ನಾಯಕರನ್ನು ಮತ್ತು ಸಚಿವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. 

ಮಾಜಿ ಸಚಿವರಾದ ಕೆ. ಪೊನ್ನಮುಡಿ, ಕೆ.ಎನ್.ನೆಹ್ರೂ ವೀರಪಾಂಡಿ ಆರ್ಮುಗಮ್ ಮೊದಲಾದವರು ಭೂ ಕಬಳಿಕೆ ಆರೋಪದ ಮೇಲೆ ಬಂಧಿತರಾದವರಲ್ಲಿ ಸೇರಿದ್ದಾರೆ.ಇವರಲ್ಲದೇ ಮಾಜಿ ಉಪ ಮುಖ್ಯಮಂತ್ರಿ ಎಂ.ಕೆ.ಸ್ಟ್ಯಾಲಿನ್ ಮತ್ತು ಅವರ ಮಗ ಉದಯನಿಧಿ ಸ್ಟ್ಯಾಲಿನ್ ಅವರ ವಿರುದ್ಧವೂ ಭೂ ಕಬಳಿಕೆಯ ಆರೋಪದ ಮೇಲೆ ಪ್ರಕರಣಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.

ಎಐಡಿಎಂಕೆ ಸರ್ಕಾರವು, ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದಿವೆ ಎನ್ನಲಾದ ಭೂ ಕಬಳಿಕೆ ಪ್ರಕರಣಗಳ ತನಿಖೆಗಾಗಿಯೇ ವಿಶೇಷ ತನಿಖಾ ವಿಭಾಗವನ್ನು ತೆರೆದಿದೆ. 

ಪ್ರತಿಕ್ರಿಯಿಸಿ (+)