ಸೋಮವಾರ, ಜನವರಿ 20, 2020
27 °C

ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿ: ಹೆಗ್ಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ರೋಟರಿಯಂತಹ ಸಮುದಾಯ ಸಂಸ್ಥೆಗಳು ಭ್ರಷ್ಟಾಚಾರದ ವಿರುದ್ಧ  ಧ್ವನಿ ಎತ್ತಿ ರಾಷ್ಟ್ರದ ಉನ್ನತಿಗಾಗಿ ಶ್ರಮಿಸಬೇಕೆಂದು ನಿವೃತ ಲೋಕಾಯುಕ್ತ ಸಂತೋಷ್ ಹೆಗ್ಡೆ ಹೇಳಿದರು.ಕೆಂಗೇರಿ  ರೋಟರಿ ಸಂಸ್ಥೆಯು ಆಯೋಜಿಸಿದ್ದ ಸಾರ್ವಜನಿಕ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಸರ್ಕಾರ ಜನರ ಹಣದಿಂದ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಪ್ರಚಾರ ಗಿಟ್ಟಿಸುತ್ತದೆ, ಆದರೆ ರೋಟರಿ ಸಂಸ್ಥೆಯವರು ಸ್ವಂತ ಹಣವನ್ನು ಸೇವಾಕಾರ್ಯಕ್ಕೆ ಬಳಸುತ್ತಿ ರುವುದು  ಪ್ರಶಂಸನೀಯ ಎಂದರು.  ರೋಟರಿ ಸಂಸ್ಥೆಯ ಎಸ್. ನಾಗೇಂದ್ರ, ಎ.ಎಸ್. ವೆಂಕಟೇಶ್, ರಾಜೇಂದ್ರ ರೈ, ಬಿ. ಅಮರನಾಥ್, ಹರಿಯಾನಿ ಇತರರು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)