ಭಾನುವಾರ, ಮಾರ್ಚ್ 26, 2023
31 °C

ಭ್ರಷ್ಟಾಚಾರ ನಿರ್ಮೂಲನೆ ಯುವಶಕ್ತಿಯಿಂದ ಸಾಧ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭ್ರಷ್ಟಾಚಾರ ನಿರ್ಮೂಲನೆ ಯುವಶಕ್ತಿಯಿಂದ ಸಾಧ್ಯ

ರಾಯಚೂರು: ದೇಶಾದ್ಯಂತ ವ್ಯಾಪಿಸಿರುವ ಭ್ರಷ್ಟಾಚಾರ ನಿರ್ಮೂಲನೆ ಯಾವುದೇ ತಂತ್ರಜ್ಞಾನದಿಂದ ಸಾಧ್ಯವಾಗುವುದಿಲ್ಲ. ಬದಲಾಗಿ ಯುವಶಕ್ತಿಯಿಂದ ಮಾತ್ರ ಸಾಧ್ಯವಾಗುತ್ತದೆ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಕಾಶೀರಾವ್ ಪಾಟೀಲ್ ತಿಳಿಸಿದರು.ಇಲ್ಲಿನ ಸರ್ಕಾರಿ ನೌಕರರ ಸಭಾಭವನದಲ್ಲಿ ಕರ್ನಾಟಕ ಜನ ಜಾಗೃತಿ ಸಮಿತಿಯು ಭಾನುವಾರ  ಆಯೋಜಿಸಿದ್ದ ಜಿಲ್ಲಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.ಭ್ರಷ್ಟಾಚಾರದ ವಿರುದ್ಧ ಒಂದೆಡೆ ಜನಜಾಗೃತಿ ಹಾಗೂ ಮತ್ತೊಂದೆಡೆ ಹೋರಾಟ ನಡೆಸುತ್ತ ಬರಲಾಗಿದೆ. ಆದರೆ, ಇಂಥ ಹೋರಾಟಗಳಿಗೆ ಮುಂದಾಳತ್ವ ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಇರುವುದು ವಿಪರ್ಯಾಸ ಎಂದು ಕಳವಳ ವ್ಯಕ್ತಪಡಿಸಿದರು.ಡಾ.ಟಿ.ಎಸ್ ಸುನೀತ್‌ಕುಮಾರ ಮಾತನಾಡಿದರು. ಡಾ.ವಿಠಲ ಉದಗಟ್ಟಿ, ಡಾ. ವಿ.ಎ ಮಾಲಿಪಾಟೀಲ್, ಟಿ.ಆರ್ ರಾವ್, ದುರ್ಗಾ ಪ್ರಸಾದ, ಪಿ.ಎಸ್ ಹಿರೇಮಠ ಮಾತನಾಡಿದರು. ಎನ್.ಎಸ್.ವೀರೇಶ ಅಧ್ಯಕ್ಷತೆವಹಿಸಿದ್ದರು. ರಾಮಣ್ಣ,ಅಶೋಕ ಪ್ಯಾಟಿ, ಬಿ.ಆರ್ ಅಪರ್ಣ, ರಾಮಣ್ಣ, ಸಿ.ಮಹೇಶ, ಚನ್ನಬಸವ ಜಾನೇಕಲ್, ಶರಣಬಸವ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.