ಶನಿವಾರ, ಏಪ್ರಿಲ್ 17, 2021
28 °C

ಭ್ರಷ್ಟ ಸರ್ಕಾರ ಬೆಂಬಲಿಸಬೇಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭ್ರಷ್ಟ ಸರ್ಕಾರ ಬೆಂಬಲಿಸಬೇಡಿ

ಗುರುಮಠಕಲ್‌: ಹಗರಣಗಳ ಸರಮಾಲೆಯನ್ನು ಹೊಂದಿರುವ ಕೇಂದ್ರ ಸರ್ಕಾರದಲ್ಲಿ ಭ್ರಷ್ಟತೆ ತಾಂಡವ ವಾಡುತ್ತಿದೆ. ಬೆಳಗಾದರೆ ಸಾಕು ಪ್ರತಿದಿನ ಮಾಧ್ಯಮದಲ್ಲಿ ಕೇಂದ್ರ ಸರ್ಕಾರ ಹಗರಣಗಳು ಹೊರಬೀಳು ತ್ತಲೆ ಇವೆ, ಕೇಂದ್ರ ಸರ್ಕಾರದ ಭ್ರಷ್ಟತೆ ಯಿಂದಾಗಿ ಬೆಲೆಗಳು ಗಗನಕ್ಕೇರಿವೆ ಇಂತಹ ಸರ್ಕಾರವನ್ನು ಬೆಂಬಲಿಸ ಬೇಡಿ ಎಂದು ಮುಖಂಡರಾದ ವೆಂಕಟ ರೆಡ್ಡಿ ಮುದ್ನಾಳ್‌ ಕರೆ ನೀಡಿದರು.ಅವರು ಗುರುವಾರ ಪಟ್ಟಣದ ಬಿಜೆಪಿ ಯುವ ಮೋರ್ಚ ಘಟಕದಿಂದ ಕೇಂದ್ರ ಸರಕಾರದ ಭ್ರಷ್ಟತೆ ವಿರೋಧಿಸಿ ರಾಜ್ಯವ್ಯಾಪಿ ಪಾದಯಾತ್ರೆಗೆ ಬೆಂಬಲಿಸಿ ಹಮ್ಮಿಕೊಳ್ಳಲಾದ ಪಾದಯಾತ್ರೆಯ ನೇತೃತ್ವವಹಿಸಿ ಸಮಾರಂಭದಲ್ಲಿ ಮಾತ ನಾಡಿದರು.ಪಟ್ಟಣ ಪ್ರವಾಸಿ ಮಂದಿರದಿಂದ ಆರಂಭಗೊಂಡ ಪಾದಯಾತ್ರೆ ವಿಶೇಷ ತಹಸೀಲ್ದಾರ ಕಾರ್ಯಲಯದಲ್ಲಿ ಕೇಂದ್ರ ಸರ್ಕಾರದ ವಿವಿಧ ಹಗರಣಗಳ ಕುರಿತು ದೂರನ್ನು ವಿಶೇಷ ತಹಸೀಲ್ದಾರ ಮೂಲಕ ರಾಷ್ಟ್ರಪತಿ ಗಳಿಗೆ ಸಲ್ಲಿಸಿದರು. ನಂತರ ಕೇಂದ್ರ ಸರ್ಕಾರದ  ವಿರುದ್ದ ಘೋಷಣೆಗಳನ್ನು ಕೂಗುತ್ತ ಮುಖ್ಯ ಬೀದಿಯಲ್ಲಿ ಸಾಗಿ ಗಾಂಧಿ ಮೈದಾನದ ಬಹಿರಂಗ ಸಭೆ ಯನ್ನು ತಲುಪಿದರು.ವಿದೇಶಿ ಬ್ಯಾಂಕ್‌ಗಳಲ್ಲಿ ಇರುವ ಕಪ್ಪು ಹಣ ಹೊಂದಿರುವವರ  ಪಟ್ಟಿಯನ್ನು ಬಾಂಕ್‌ ನೀಡಿದ್ದರು ಅದನ್ನು ಪ್ರಕಟ ಪಡಿಸದೇ ಹಣವನ್ನು ಭಾರತಕ್ಕೆ ತರಿಸುವ ವಿಚಾರ ಕೂಡ ಮಾಡುತ್ತಿಲ್ಲ. 2 ಜಿ ಸ್ಪೆಕ್ಟ್ರಂ ಹಗರಣ, ಆದರ್ಶ ಆಪಾರ್ಟಮೆಂಟ್‌ ಹಗರಣ, ಕಾಮನ್‌ವೆಲ್ತ್‌ ಹಗರಣ ಹಿಗೆ ಹಗರಣಗಳ ಸರಣಿಯನ್ನು ಹೊಂದಿದ ಕಾಂಗ್ರೆಸ್‌ ಸರ್ಕಾರವನ್ನು ಬುಡ ಸಮೇತ ಕೀಳಬೇಕು ಜನರು ಜಾಗೃತರಾಗಬೇಕು ಎಂದು ಮುದ್ನಾಳ್‌ ನುಡಿದರು.ರಾಜ್ಯ ಸರ್ಕಾರ ಕೇವಲ ಮೂರು ವರ್ಷಗಳ ಅವದಿಯಲ್ಲಿ ರೈತರಿಗೆ ಅನುಕೂಲವಾಗುವ ರೈತಪರ ಬಜೆಟ್‌ ಮಂಡನೆಮಾಡಿ, 1 ಶೇಕಡಾ ಬಡ್ಡಿ ದರಲ್ಲಿ ಸಾಲ, ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ 10 ಸಾವಿರ ರೂಪಾಯಿ ನೀಡುವ ಯೋಜನೆ, ಭಾಗ್ಯಲಕ್ಷ್ಮಿ, ಸಂಧ್ಯಾ ಸುರಕ್ಷಾ ಹೀಗೆ ಹತ್ತು ಹಲವು ಜನಪರ ಮತ್ತು ಜನರ ಮನೆಬಾಗಿಲಿಗೆ ತಲುಪಿಸಿವ ಯೋಜನೆಗಳ ಮೂಲಕ ಅಭಿವೃದ್ದಿ ಸಾಧಿಸಿದ ಸರ್ಕಾರ ಎಂದರೆ ಅದು ಬಿಜೆಪಿ ಸರ್ಕಾರ. ಎಪಿಎಂಸಿ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಿ ಮತ ನೀಡುವಂತೆ ಜಿ.ಪಂ. ಮಾಜಿ ಸದಸ್ಯೆ ನಾಗರತ್ನ ಕುಪ್ಪಿ ನುಡಿದರು.ಎಪಿಎಂಸಿಯಲ್ಲಿ ಬದಲಾವಣೆ ಕಾಣ ಬೇಕು ರೈತರಿಗೆ ಆಗುವ ಅನ್ಯಾಯ ವನ್ನು ತಪ್ಪಿಸಲು ಪಕ್ಷದ ಅಭ್ಯರ್ಥಿ ಗಳಿಗೆ ಮತನೀಡಿ ಆಶಿರ್ವಾದ ಮಾಡು ವಂತೆ ಮುಖಂಡರಾದ ನರಸಿಂಹಲು ನಿರೇಟಿ ಕೋರಿದರು.ಖಂಡಪ್ಪ ದಾಸನ್‌, ಶರಣಗೌಡ ಬಾಡಿಯಾಲ್‌, ರಮೇಶ ಕೋಟಿಮನಿ, ಸುನೀತಾ ಚೌವ್ಹಾಣ, ವೆಂಕಟಪ್ಪ ಅವಂಗಪೂರ, ವೆಂಕಟಪ್ಪ ಯೆಲ ಮೇಲ್‌, ಸಿದ್ದಾಜಿ ಪಾಟೀಲ್‌, ಬಸರೆಡ್ಡಿ ಗಾಜರಕೋಟ್‌, ರಾಜೇಂದ್ರ ಕಲಾಲ್‌, ವೀಣಾ ಮೋದಿ, ಶ್ರೀದೇವಿ, ವೀರಪ್ಪ ಪಡಿಗೆ, ಚಂದುಲಾಲ್‌ ಚೌದ್ರಿ, ಕೆ.ದಾಸ್‌, ಹನೀಫ್‌, ಬಸಲಿಂಗ ಅಳೆಗಾರ, ವೆಂಕಟಪ್ಪ ಪಡಿಗೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.