ಶನಿವಾರ, ಮೇ 21, 2022
22 °C

ಮಂಗಳವಾರ, 26-6-1962

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚವಾಣರ ಆಪಾದನೆಗೆ ಮುಖ್ಯಮಂತ್ರಿ ನಿರಾಕರಣೆ

ಬೆಂಗಳೂರು, ಜುನ್ 25 - ಗಡಿ ವಿವಾದ ಸಂಬಂಧದಲ್ಲಿ ಪಂಚಾಯಿತಿಗೆ ಅವಕಾಶವಿದೆಯೆಂದು ತಾವು ಭಾವಿಸುವುದಿಲ್ಲವೆಂದು ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪನವರು ಇಂದು ಇಲ್ಲಿ ತಿಳಿಸಿದರು.ನಗರದಲ್ಲಿ ವಿದ್ಯುತ್ ಕಡಿತ

ಬೆಂಗಳೂರು, ಜೂನ್ 25 - ಕಾಗೆ ಒಯ್ಯುತ್ತಿದ್ದ ತಂತಿಯ ಚೂರು ಕೆಳಗೆ ಬಿದ್ದು ತಗಲಿದ ಪರಿಣಾಮವಾಗಿ, ರಾಜಾಜಿನಗರದ ಬಳಿಯಿರುವ ರಿಸೀವಿಂಗ್ ಸ್ಟೇಷನ್ನಿನಲ್ಲಿ ಜೋಗ್‌ನಿಂದ ವಿದ್ಯುಚ್ಛಕ್ತಿಯನ್ನು ಒದಗಿಸುವ 100 ಕೆ. ವಿ. ವಿದ್ಯುತ್ ಲೈನಿಗೆ ಸೇರಿದ ತಾಮ್ರದ ಕೊಳವೆಯೊಂದು ಕರಗಿ, ಬೆಂಗಳೂರು ನಗರ ಇಂದು ಸುಮಾರು ಆರೂವರೆ ಗಂಟೆಗಳ ಕಾಲ ವಿದ್ಯುತ್‌ಚ್ಛಕ್ತಿಯಿಲ್ಲದೆ ತೊಂದರೆ ಪಡಬೇಕಾಯಿತು.ಅಪರಾಧ ಪತ್ತೆ: ನಗರ ಪ್ರಥಮ

ಬೆಂಗಳೂರು, ಜೂನ್ 25 - 1957ರಲ್ಲಿ ರಾಷ್ಟ್ರದಲ್ಲಿ ಅಪರಾಧಗಳನ್ನು ಪತ್ತೆ ಹಚ್ಚುವುದರಲ್ಲಿ ಪ್ರಥಮ ಸ್ಥಾನವನ್ನು ಗಳಿಸಿರುವ ಬೆಂಗಳೂರು ನಗರ 1961ರಲ್ಲೂ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ.ತಿಂಗಳ ಅಂತ್ಯದೊಳಗೆ ಸಂಪುಟ ವಿಸ್ತರಣೆ

ಬೆಂಗಳೂರು, ಜೂನ್ 25 - ಇದೇ ತಿಂಗಳ ಕೊನೆಯೊಳಗೆ ಮಂತ್ರಿಮಂಡಲ ಪೂರ್ಣವಾಗಿ ರಚಿಸಬಹುದೆಂದು ಮುಖ್ಯಮಂತ್ರಿ  ಎಸ್. ನಿಜಲಿಂಗಪ್ಪನವರು ಇಂದು ವರದಿಗಾರರಿಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.