ಮಂಗಳೂರು: ಈ ಬಾರಿ ಮಂಗಳೂರು ದಸರಾ ಎಂದಿನಂತಿರದೆ ಸುಧಾರಣೆಯ ಹಾದಿಯಲ್ಲಿ ಸಾಗಲಿದ್ದು, ಕುದ್ರೋಳಿಯ ಗೋಕರ್ಣನಾಥೇಶ್ವರ ದೇಗುಲ ಅಪರೂಪದ `ವಿಧವಾ ವಿಮೋಚನೆ~ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದೆ.

ಪತಿ ಕಳೆದುಕೊಂಡ ಮಹಿಳೆಯರಿಗೆ ಗೌರವ ತೋರಿಸಿ, ಸಮಾಜ ಹೊರಿಸಿರುವ ಕಳಂಕ ನಿವಾರಿಸುವ ಸಮಾಜ ಸುಧಾರಣಾ ಕಾರ್ಯಕ್ರಮ ಅ. 3ರಂದು ದೇಗುಲದಲ್ಲಿ ನಡೆಯಲಿದೆ. ದೇವಸ್ಥಾನದ 21 ವರ್ಷಗಳ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಇಂಥ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಇದು ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಅವರ ಚಿಂತನೆ ಎಂದು ದೇವಸ್ಥಾನದ ವಕ್ತಾರ ಹರಿಕೃಷ್ಣ ಬಂಟ್ವಾಳ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಎಲ್ಲಾ ಜಾತಿ-ಧರ್ಮದ ವಿಧವೆಯರಿಗೂ ಪ್ರಸಾದ ರೂಪದಲ್ಲಿ ಹೊಸ ಸೀರೆ, ರವಿಕೆ, ಹೂ, ಬಳೆ ಹಾಗೂ ಕುಂಕುಮವನ್ನು ದೇವರ ಸಮ್ಮುಖದಲ್ಲಿಯೇ ನೀಡಲಾಗುವುದು. ನಂತರ ದೇವರನ್ನಿರಿಸಿದ ಬೆಳ್ಳಿರಥವನ್ನು ಅವರಿಂದಲೇ ಎಳೆಸಲಾಗುವುದು. ಅಲ್ಲದೇ, ಯಾರಾದರೂ ವಿಧವಾ ವಿವಾಹಕ್ಕೆ ಮುಂದಾದರೆ ಮುಂದಿನ ದಿನಗಳಲ್ಲಿ ದೇವಸ್ಥಾನದ ವತಿಯಿಂದಲೇ ಉಚಿತವಾಗಿ ಮದುವೆ ಸಮಾರಂಭ ನಡೆಸಿಕೊಡಲಾಗುವುದು ಎಂದು ವಿವರಿಸಿದರು.

ಸಾಂಸ್ಕೃತಿಕ ವೈಭವ, ಭವ್ಯ ಶೋಭಾಯಾತ್ರೆ, ನವದುರ್ಗೆಯರು ಮತ್ತು ಶಾರದೆಯ ಭವ್ಯ ಮೂರ್ತಿ, ಝಗಮಗಿಸುವ ವಿದ್ಯುದಾಲಂಕಾರ ಸಹಿತ ಹತ್ತಾರು ಆಕರ್ಷಣೆಗಳೊಂದಿಗೆ ಗಮನ ಸೆಳೆದಿರುವ ಮಂಗಳೂರು ದಸರಾಕ್ಕೆ ಕುದ್ರೋಳಿಯ ಗೋಕರ್ಣನಾಥೇಶ್ವರ ದೇವಸ್ಥಾನ ಸಜ್ಜಾಗಿದ್ದು, ಬುಧವಾರ ಬೆಳಿಗ್ಗೆ 11.35ಕ್ಕೆ ನವರಾತ್ರಿ ಮಹೋತ್ಸವ ಉದ್ಘಾಟನೆ ನಡೆಯಲಿದೆ. ಅ. 2ರ ಸಂಜೆ 6.30ಕ್ಕೆ ದಸರಾ ಮಹೋತ್ಸವವನ್ನು ಕೇಂದ್ರ ವಿಮಾನಯಾನ ಸಚಿವ ವಯಲಾರ್ ರವಿ ಉದ್ಘಾಟಿಸುವರು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.