ಬುಧವಾರ, ಮೇ 12, 2021
19 °C

ಮಂಗಳೂರು: ಲಘು ಭೂಕಂಪದ ಅನುಭವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ನಗರದ ವಿವಿಧ ಭಾಗಗಳಲ್ಲಿ ಬುಧವಾರ ಮಧ್ಯಾಹ್ನ 2.15ರ ಹೊತ್ತಿಗೆ ಲಘು ಭೂಕಂಪ ಆದ ಅನುಭವ ಆಗಿದೆ. ಈ ಹಿನ್ನೆಲೆಯಲ್ಲಿ ಸುನಾಮಿ ಸಂಭವಿಸುವ ಅಪಾಯದ ಸೂಚನೆ ಇದ್ದು ಕಡಲ ತೀರದಲ್ಲಿರುವವರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ.`ನಾನು ಕುಳಿತಿದ್ದ  ಕುರ್ಚಿ ಕೆಲವು ಸೆಕೆಂಡ್‌ಗಳ ಕಾಲ ಏಕಾಏಕಿ ಅಲ್ಲಾಡಿದೆ. ನಮ್ಮ ಕಚೇರಿಯಲ್ಲಿದ್ದ ಕೆಲವರಿಗೂ ಇದೇ ಅನುಭವ ಆಗಿದೆ~ ಎಂದು ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಹೀರಾ ವಿ. ಭಟ್ `ಪ್ರಜಾವಾಣಿ~ಗೆ ತಿಳಿಸಿದರು.ಕೂಳೂರಿನ ಗುಪ್ತ ಕೋಲ್ ಸಂಸ್ಥೆ ಕಚೇರಿ ಇರುವ ವಾಣಿಜ್ಯ ಸಂಕೀರ್ಣದಲ್ಲೂ  ಭೂಕಂಪದ ಅನುಭವ ಆಗಿದೆ.

`ನಾನು ಊಟ ಮುಗಿಸಿ ಬಂದು ಕುರ್ಚಿಯಲ್ಲಿ ಕುಳಿತಿದ್ದೆ. ಏಕಾಏಕಿ ಕುರ್ಚಿ ಅಲ್ಲಾಡಿದ ಅನುಭವ ಆಯಿತು. ಮೊದಲು ಆರೋಗ್ಯ ಸಮಸ್ಯೆಯಿಂದ ಹೀಗಾಗಿರಬಹುದು ಎಂದುಕೊಂಡಿದ್ದೆ. ಬಳಿಕ ಇದೇ ರೀತಿಯ ಅನುಭವ ಅನೇಕರಿಗೆ ಆಗಿದ್ದು ತಿಳಿಯಿತು~ ಎಂದು ಸಂಸ್ಥೆ ಸಿಬ್ಬಂದಿ ರಾಮದಾಸ ಎಕ್ಕೂರು ತಿಳಿಸಿದರು. ಮುನ್ನೆಚ್ಚರಿಕೆ: `ಮೀನುಗಾರಿಕೆಗೆ ತೆರಳಿದವರು ಸಮುದ್ರದಿಂದ ವಾಪಾಸ್ಸಾಗುವಂತೆ ಸೂಚನೆ ನೀಡಲಾಗಿದೆ. ಕಡಲಿನ ಬೆಳವಣಿಗೆ ಬಗ್ಗೆ ನಿಗಾ ವಹಿಸಲಾಗಿದೆ. ಸುನಾಮಿ ಚೆನ್ನೈ ಸಮುದ್ರ ತೀರಕ್ಕೆ ಅಪ್ಪಳಿಸಿದರೆ ನಮಗೆ ಮಾಹಿತಿ ಬರುತ್ತದೆ. ಆ ಬೆಳವಣಿಗೆಯನ್ನು ನೋಡಿಕೊಂಡು ಇಲ್ಲಿನ ಸಮುದ್ರ ತೀರದ ಜನರನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗಿದೆ~ ಎಂದು ಜಿಲ್ಲಾಧಿಕಾರಿ ಎನ್.ಎಸ್.ಚನ್ನಪ್ಪ ಗೌಡ `ಪ್ರಜಾವಾಣಿ~ ತಿಳಿಸಿದರು.

  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.