ಶುಕ್ರವಾರ, ಮೇ 29, 2020
27 °C

ಮಂಡಕ್ಕಿ ಗೋದಾಮಿಗೆ ಬೆಂಕಿ: ಅಪಾರ ನಷ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಮಂಡಕ್ಕಿ ಗೋದಾಮಿಗೆ ಬುಧವಾರ ರಾತ್ರಿ ಬೆಂಕಿಬಿದ್ದು ಲಕ್ಷಾಂತರ ರೂ ನಷ್ಟ ಸಂಭವಿಸಿದೆ.ಆಜಾದ್‌ನಗರದ ಹೊದಿಗೆರೆ ಸಾದಿಕ್ ಎಂಬುವರಿಗೆ ಸೇರಿದ ಮಂಡಕ್ಕಿ ಗೋದಾಮಿನಲ್ಲಿ ಘಟನೆ ನಡೆದಿದೆ.ಗೋದಾಮಿನಲ್ಲಿದ್ದ 800 ಚೀಲ ಮಂಡಕ್ಕಿ ಹುರಿಯಲು ಸಿದ್ಧಗೊಳಿಸಿದ್ದ ಅಕ್ಕಿ, ಖಾಲಿ ಚೀಲಗಳು ಸೇರಿ ಸುಮಾರು  9 ಲಕ್ಷ ನಷ್ಟ ಸಂಭವಿಸಿದೆ ಎಂದು  ಸಾದಿಕ್ ತಿಳಿಸಿದರು. ಸುದ್ದಿ ತಿಳಿದ ತಕ್ಷಣ ಮೂರು ಅಗ್ನಿಶಾಮಕ ಮತ್ತು ತುರ್ತುಸೇವಾ ಸಿಬ್ಬಂದಿ  ಆಗಮಿಸಿ ಬೆಂಕಿ ನಂದಿಸಿದವು.ಕಳೆದ ವರ್ಷವೂ ಇದೇ ಸ್ಥಳದಲ್ಲಿ ಸಾದಿಕ್ ಅವರದೇ ಗೋದಾಮಿಗೆ ಬೆಂಕಿಬಿದ್ದಿತ್ತು. ಅಂದು ಹಸು ಮತ್ತು ಕುರಿ ಬಲಿಯಾಗಿದ್ದವು. ಘಟನೆ ಸಂದರ್ಭ ಎಲ್ಲ ಕಾರ್ಮಿಕರು ಮನೆಗೆ ತೆರಳಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆಜಾದ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.