ಶುಕ್ರವಾರ, ಮಾರ್ಚ್ 5, 2021
28 °C

ಮಂತ್ರಾಲಯ: ಸುವರ್ಣ ಲೇಪಿತ ಗೋಪುರ ಕಳಶಾಭಿಷೇಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂತ್ರಾಲಯ: ಸುವರ್ಣ ಲೇಪಿತ ಗೋಪುರ ಕಳಶಾಭಿಷೇಕ

ರಾಯಚೂರು: ಮಂತ್ರಾಲಯದ ಶ್ರೀರಾಘವೇಂದ್ರಸ್ವಾಮಿ ಮಠದಲ್ಲಿ 45 ಅಡಿ ಎತ್ತರದ ಸುವರ್ಣ ಲೇಪಿತ ಗೋಪುರದ ಕಳಶಾಭಿಷೇಕವನ್ನು ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಶನಿವಾರ ನೆರವೇರಿಸಿದರು.ಗುರುರಾಯರ ಮೂಲ ವೃಂದಾವನ ಮತ್ತು ವಾದೀಂದ್ರ ತೀರ್ಥರ ವೃಂದಾವನದ ನಡುವೆ ಇರುವ ಹಳೆಯ ಗೋಪುರವನ್ನು ಜೀರ್ಣೋದ್ಧಾರ ಮಾಡಿ ಎತ್ತರ ಹೆಚ್ಚಿಸಲಾಗಿದೆ. ಬಹುಕೋಟಿ ವೆಚ್ಚದಲ್ಲಿ ಸುವರ್ಣ ಲೇಪನ ಕೈಗೊಳ್ಳಲಾಗಿದೆ.ಕಳಶಾಭಿಷೇಕಕ್ಕೂ ಮುನ್ನ ರಾಘವೇಂದ್ರರ ಮೂಲವೃಂದಾವನದ ಪ್ರಾಕಾರದಲ್ಲಿ ಸುಮಾರು ₹8 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಶಿಲಾಮಂಟಪದ ಉದ್ಘಾಟನೆ ನಡೆಯಿತು. ಬೆಳಿಗ್ಗೆ 10.35ರ ಶುಭ ಮುಹೂರ್ತದಲ್ಲಿ ಗೋವು–ಕರು, ಮೂಲ ರಾಮದೇವರ ಮೂರ್ತಿ, ಸ್ವಾಮೀಜಿ ಅವರು ಶಿಲಾಮಂಟಪವನ್ನು ಪ್ರವೇಶ ಮಾಡಿದರು. ಇದರ ಅಂಗವಾಗಿ ವಾಸ್ತು ಹೋಮ ಸೇರಿದಂತೆ ಅನೇಕ ಹೋಮಗಳು, ಚತುರ್ವೇದ ಪಾರಾಯಣ ನಡೆಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.