ಶನಿವಾರ, ಜೂನ್ 12, 2021
24 °C

ಮಕ್ಕಳಿಗೆ ಶಿಕ್ಷಣ: ಮುಸ್ಲಿಂ ಸಮುದಾಯಕ್ಕೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ‘ಮುಸ್ಲಿಂ ಸಮುದಾಯದ ಪೋಷಕರು ಹೆಣ್ಣು ಹಾಗೂ ಗಂಡು ಎಂಬ ತಾರತಮ್ಯ ಮಾಡದೆ ಎಲ್ಲರಿಗೂ ಗುಣಮಟ್ಟದ ಶಿಕ್ಷಣ ಕೊಡಿಸಲು ಮುಂದಾಗಬೇಕು’ ಎಂದು ಎಂಇಎ ಸಂಸ್ಥೆ ಅಧ್ಯಕ್ಷ ಅಜ್ಮಲ್ ಅಹಮದ್ ಷರೀಫ್‌ ಸಲಹೆ ನೀಡಿದರು.ನಗರದ ಗಾಳಿಪುರ ಬಡಾವಣೆ ಯಲ್ಲಿರುವ ಗ್ಯಾಲಕ್ಸಿ ಪ್ರಾಥಮಿಕ ಶಾಲೆಯ 3ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಸರ್ಕಾರ ಶಿಕ್ಷಣಕ್ಕಾಗಿ ಹೆಚ್ಚಿನ ಒತ್ತು ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಪೋಷ ಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವ ದಿಕ್ಕಿನಲ್ಲಿ ಸಾಗಬೇಕಿದೆ ಎಂದರು.ವಕೀಲ ವಸೀಂವುಲ್ಲಾ ಮಾತನಾಡಿ, ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಲು ಹಣಕಾಸು, ಸ್ಥಾನಮಾನ, ಶಿಕ್ಷಣ ಅತಿಮುಖ್ಯವಾಗಿದೆ. ಹಣವನ್ನು ಯಾವ ಸಂದರ್ಭದಲ್ಲಿ ಬೇಕಾದರೂ ಸಂಪಾದನೆ ಮಾಡಬಹುದು. ಸಮಾಜದಲ್ಲಿ ಸ್ಥಾನಮಾನ ಆಕಸ್ಮಿಕವಾಗಿ ದೊರೆಯುತ್ತದೆ. ಶಿಕ್ಷಣವನ್ನು ಬಹಳ ಶ್ರಮಪಟ್ಟು ಪಡೆಯಬೇಕಿದೆ. ಈ ಹಿನ್ನೆಲೆಯಲ್ಲಿ ಮುಸ್ಲಿಂ ಬಾಂಧವರು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕಿದೆ ಎಂದು ಹೇಳಿದರು.ನಗರಸಭೆ ಮಾಜಿ ಸದಸ್ಯ ಮಹಮದ್ ಅಸ್ಗರ್ ಮಾತನಾಡಿ, ಗ್ಯಾಲಕ್ಸಿ ಶಿಕ್ಷಣ ಸಂಸ್ಥೆಯು ಮುಸ್ಲಿಂ ಸಮುದಾಯದ ಬಡಮಕ್ಕಳಿಗೆ ಶಿಕ್ಷಣ ನೀಡುವ ದಿಕ್ಕಿನಲ್ಲಿ ಶ್ರಮಿಸುತ್ತಿದೆ ಎಂದು ಶ್ಲಾಘಿಸಿದರು.ಕಾರ್ಯಕ್ರಮದಲ್ಲಿ ಎಪಿಎಂಸಿ ಸದಸ್ಯ ಎಲ್. ಸುರೇಶ್, ನಗರಸಭೆ ಸದಸ್ಯರಾದ ಮಹೇಶ್, ಇಮ್ರಾನ್, ಮಾಜಿ ಸದಸ್ಯ ಸೈಯದ್ ಅತೀಜ್ ಅಹಮದ್, ಎಚ್.ಕೆ. ಪಂಕ್ಷನ್ ಹಾಲ್ ಮಾಲೀಕ ಸೈಯದ್ ಫಾರೂಕ್ ಅಹಮದ್, ಎ.ಎ. ವಾಜಿದ್, ನಾಗೇಶ್ ಸೋಸ್ಲೆ, ಸಂಸ್ಥೆಯ ಕಾರ್ಯದರ್ಶಿ ಮಹಮದ್ ಅಜೀಂ, ಮುಖ್ಯಶಿಕ್ಷಕ ಅಬ್ದುಲ್ ನಯಾಜ್ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.