ಸೋಮವಾರ, ಜನವರಿ 20, 2020
21 °C

ಮಕ್ಕಳಿಗೆ ಸಂಸ್ಕೃತಿ ಪರಿಚಯಿಸಿದರೆ ವ್ಯಕ್ತಿತ್ವ ವೃದ್ಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

                

ಶಿರ್ವ (ಕಟಪಾಡಿ): `ದೇಶಕ್ಕೆ ವಿಶ್ವಮಾನ್ಯತೆ ತಂದು ಕೊಟ್ಟ , ಸಾಹಿತಿಗಳು, ದಾರ್ಶನಿಕರು, ಕಲಾಕಾರರನ್ನು ಪರಿಚಯಿಸುವುದರ ಜೊತೆಗೆ ಭವ್ಯವಾದ ವಿಶಿಷ್ಠ ಜಾನಪದ, ಪೌರಾಣಿಕ, ಐತಿಹಾಸಿಕ ಸಂಸ್ಕೃತಿಯನ್ನು ನಮ್ಮ ಮಕ್ಕಳಿಗೆ ಪರಿಚಯಿಸಬೇಕು~ ಎಂದು ಸಾಹಿತಿ ಕೆ.ಎಸ್.ಶ್ರಿಧರಮೂರ್ತಿ ಹೇಳಿದರು.ಶಿರ್ವ ಸಮೀಪದ ಪಾಂಬೂರು ಪವಿತ್ರ ಶಿಲುಬೆ ಇಗರ್ಜಿ ವಠಾರದಲ್ಲಿ ಭಾನುವಾರ ಕಲೆ, ಸಂಸ್ಕೃತಿ, ಸಾಹಿತ್ಯಕ್ಕಾಗಿ ರೂಪುಗೊಂಡ `ಪರಿಚಯ~  ವಿನೂತನ ಸಂಸ್ಥೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಅಳಿದು ಹೋಗುವುದನ್ನು ಉಳಿಸಿಕೊಳ್ಳುವ ಕಾರ್ಯ ಆಗಬೇಖಿದೆ. ಕಲಾ ಶ್ರಿಮಂತಿಕೆಯನ್ನು ಇಟ್ಟುಕೊಂಡು, ಬಡವರೆನ್ನುವ ಕೀಳರಿಮೆ ತೊಡೆದು ಹಾಕಬೇಕು~ ಎಂದರು.ವಿನ್ಸೆಂಟ್ ಆಳ್ವ ಅವರ ಅಂಕಣ ಸಂಗ್ರಹ `ಕರಂದಾಯ್~ ಮತ್ತು ವಾಲ್ಟರ್ ಮೊತೇರೊ ಅವರ ಕೃ~ತುಂ ಹಾಸೊನ್ ಜಿಯೆ~  ಕೊಂಕಣಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಕೊಂಕಣಿ ಮಾಸಪತ್ರಿಕೆ `ದಿರ್ವೆಂ~ ಸಂಪಾದಕ ಜೋನ್ ಮೋನಿಸ್‌ಮಾತನಾಡಿ, `ಇಂದು ಆಧುನಿಕತೆಯ ನೆಪದಲ್ಲಿ ಪರಿಸರ ಹಾಗೂ ಸಂಸ್ಕೃತಿ ಹಾಳಾಗುತ್ತಿದೆ.

 

ಬರವಣಿಗೆಯ ಮೂಲಕ ಸಮಾಜವನ್ನು ಜಾಗೃತಗೊಳಿಸುವ ಕಾರ್ಯ ನಡೆಯಬೇಕು. ಕಾವ್ಯ, ಕಥೆ, ಲಲಿತಕಲೆ, ಪ್ರಬಂಧ, ನಾಟಕಗಳು ಹೊಸ ಚಿಂತನೆಗೆ ನಾಂದಿಯಗುತ್ತವೆ.ಅಭ್ಯಾಸ,ಪರಿಶ್ರಮ ದಿಂದ ಉತ್ತಮ ಲೇಖಕನಾಗಬಹುದು~ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಿರುತೆರೆ ನಟ ಬೆಂಗಳೂರಿನ ಕೆ.ರವಿ ಭಟ್ ಮಾತನಾಡಿ, `ಗೊಂದಲಮಯ ಸನ್ನಿವೇಶದಲ್ಲಿ ಅದ್ಭುತಗಳು ಹುಟ್ಟಿಕೊಳ್ಳುತ್ತವೆ. ನಮ್ಮ ಸಂಸ್ಕೃತಿ ಎಂದೆಂದಿಗೂ ನಾಶವಾಗಲ್ಲ.ಬದಲಾವಣೆಗಳಿಗೆ ಹೊಂದಿಕೊಂಡು, ನಮ್ಮ ಸಂಸ್ಕೃತಿಯ ಪರಿಚಯದ ಜೊತೆಗೆ ಪುಸ್ತಕಗಳನ್ನು ಓದುವ ಹವ್ಯಾಸ ಮಕ್ಕಳಲ್ಲಿ ಬೆಳೆಸಬೇಕು~ ಎಂದರು.ಪವಿತ್ರ ಶಿಲುಬೆ ದೇವಾಲಯದ ಧರ್ಮಗುರು ರೆ.ಫಾ.ಚಾರ್ಲ್ಸ್ ಲೂಯಿಸ್ ಶುಭ ಹಾರೈಸಿದರು. ಗೌರವ ಅಧ್ಯಕ್ಷ ವಿನ್ಸೆಂಟ್ ಆಳ್ವ, ಅಧ್ಯಕ್ಷ ಅನಿಲ್ ಡೇಸಾ, ಕಾರ್ಯದರ್ಶಿ ಪ್ರಕಾಶ್ ನೊರೋನ್ಹ, ಐವನ್ ಪೀಟರ್, ಇಗ್ನೇಷಿಯಸ್ ಡಿಸೋಜ, ಲೂಕಾಸ್ ಡಿಸೋಜ, ಮಧುಸೂಧನ್ ರಾವ್,ಮೇಬಲ್ ಮಿನೇಜಸ್, ಬಿ.ಪುಂಡಲೀಕ ಮರಾಠೆ, ಫೆಡಿಕ್ ಸಲ್ದಾನ,  ಸಾಹಿತಿ ವಾಲ್ಟರ್ ಮೊಂತೇರೊ, ಮೋಹನದಾಸ್ ಆರ್ ಶೆಟ್ಟಿ, ವಾಯ್ಲೆಟ್ ಕ್ಯಾಸ್ತಲಿನೊ, ಪರಿಚಯ ದ ಲಾಂಛನ ಕಲಾಗಾರ್ತಿ ಅಪೂರ್ವ ಓಸ್ತಾ ಅವರನ್ನು ಅಭಿನಂದಿಸಲಾಯಿತು.ನಂತರ ನೃತ್ಯನಿಕೇತನ ಕೊಡವೂರು, ಪಟ್ಟಾಭಿರಾಮ್ ಸುಳ್ಯ, ಉಡುಪಿಯ ಕರಾವಳಿ ಕಲಾವಿದರು ಕಾರ್ಯಕ್ರಮ ನಡೆಯಿತು.

ಪ್ರತಿಕ್ರಿಯಿಸಿ (+)