ಶನಿವಾರ, ಫೆಬ್ರವರಿ 27, 2021
19 °C

ಮಕ್ಕಳು ಏನು ಮಾಡಿದರೂ ಚೆಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಕ್ಕಳು ಏನು ಮಾಡಿದರೂ ಚೆಂದ

ಬೆಂಗಳೂರು: `ಮಕ್ಕಳ ಬೇಸಿಗೆ ಶಿಬಿರವು ಉತ್ತಮವಾಗಿ ನಡೆಯುತ್ತಿದೆ. ಈ ಬಾರಿಯ ಬೇಸಿಗೆ ಶಿಬಿರದ ವಸ್ತು ವಿಷಯ `ಕರ್ನಾಟಕ~. ಕರ್ನಾಟಕದ ಇತಿಹಾಸ ಪ್ರೇಕ್ಷಣೀಯ ಸ್ಥಳಗಳು ಕುರಿತಾಗಿದೆ~ ಎಂದು ಬಾಲಭವನ ಸೊಸೈಟಿಯ ಅಧ್ಯಕ್ಷೆ ಸುಲೋಚನ ಜಿ.ಕೆ. ಭಟ್ ಹೇಳಿದರು.

ಕಬ್ಬನ್ ಉದ್ಯಾನವನದ ಬಾಲಭವನದಲ್ಲಿ ನಡೆಯುತ್ತಿರುವ ಮಕ್ಕಳ ಬೇಸಿಗೆ ಶಿಬಿರವನ್ನು ಗುರುವಾರ ಪರಿಶೀಲಿಸಿ ಮಾತನಾಡಿದ ಅವರು, `ಮಕ್ಕಳ ಪ್ರತಿಭೆಗೆ ಬೆಂಬಲ ನೀಡಿ, ಅವರಲ್ಲಿನ ಸುಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತಾಹಿಸುವುದೇ ಬೇಸಿಗೆ ಶಿಬಿರದ ಉದ್ದೇಶವಾಗಿದೆ~ ಎಂದರು.

`ಇಲ್ಲಿ ಮಕ್ಕಳ ಪ್ರತಿಭೆಯನ್ನು ಕಂಡು ಮನಸ್ಸಿಗೆ ಆನಂದವಾಗಿದೆ.  ಇಲ್ಲಿ ಮಕ್ಕಳ ಕನಸಿಗೆ ರೆಕ್ಕೆ ಮೂಡಿವೆ. ಅವರು ಪಠ್ಯವಲ್ಲದೆ, ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ತಮ್ಮ ಮುಗ್ಧ ಮನಸ್ಸಿನಿಂದ ಏನೆಲ್ಲ ಮಾಡಿದರೂ ಚೆನ್ನಾಗಿರುತ್ತದೆ~ ಎಂದು ಹೇಳಿದರು.

`ಬೇಸಿಗೆ ಶಿಬಿರವು ಏ.12 ರಿಂದ ಮೇ 20 ರವರೆಗೆ ನಡೆಯಲಿದೆ. ಆಸಕ್ತರು ಸಂಪರ್ಕಿಸಬಹುದು~ ಎಂದು ಹೇಳಿದರು. ಶಾಸಕ ಕರಡಿ ಸಂಗಣ್ಣ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.