ಉಡುಪಿ (ಪಿಟಿಐ): ವಿದ್ಯಾರ್ಥಿಗಳ ಪರೀಕ್ಷಾ ಕಾಲದಲ್ಲಿ ಲೋಡ್ ಶೆಡ್ಡಿಂಗ್ ಇರುವುದಿಲ್ಲ ಎಂದು ರಾಜ್ಯ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಭಾನುವಾರ ಇಲ್ಲಿ ಹೇಳಿದರು.

'ಮುಂಬರುವ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುವ ಸಲುವಾಗಿ ಪರೀಕ್ಷಾ ದಿನಗಳಲ್ಲಿ ಲೋಡ್ ಶೆಡ್ಡಿಂಗ್ ಮಾಡದಂತೆ ನೋಡಿಕೊಳ್ಳಲಾಗುವುದು' ಎಂದು ಶಿವಕುಮಾರ್ ಅವರು ಇಲ್ಲಿ ವರಾಹಿ ಜಲ- ವಿದ್ಯುತ್ ಯೋಜನೆ ಪರಿಶೀಲನೆ ಸಂದರ್ಭದಲ್ಲಿ ವರದಿಗಾರರಿಗೆ ತಿಳಿಸಿದರು.

ಕೆಲವು ವಿದ್ಯುತ್ ಕಂಪೆನಿಗಳು ತಮ್ಮ ಭರವಸೆಗೆ ಅನುಗುಣವಾಗಿ ವಿದ್ಯುತ್ ಉತ್ಪಾದನೆ ಮಾಡುತ್ತಿಲ್ಲ. ಅಂತಹ ಕಂಪೆನಿಗಳ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ನಾವು ಯೋಜಿಸುತ್ತಿದ್ದೇವೆ' ಎಂದು ಸಚಿವರು ನುಡಿದರು.

ದಾಮೋದರ ಕಣಿವೆ ಯೋಜನೆಯಿಂದ ವಿದ್ಯುತ್ ಖರೀದಿಸುವ ಕುರಿತ ಒಪ್ಪಂದ ಪತ್ರಕ್ಕೆ ಮಾರ್ಚ್ 4 ರಂದು ನಾವು ಸಹಿ ಮಾಡಲಿದ್ದೇವೆ' ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.