ಶನಿವಾರ, ಜನವರಿ 25, 2020
28 °C

ಮಕ್ಕಳ ಹಕ್ಕುಗಳ ನಿಗಾ ಕೇಂದ್ರ: ಪ್ರಬಂಧ ಸ್ಪರ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರವು ವಿಶ್ವವಿದ್ಯಾಲಯ ಮಟ್ಟದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ಇಂಗ್ಲಿಷ್ ಮತ್ತು ಕನ್ನಡ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿದೆ.

`ದೈಹಿಕ ಶಿಕ್ಷೆಯಿಂದ ಮಕ್ಕಳ ಮೇಲಾಗುತ್ತಿರುವ ಪರಿಣಾಮಗಳು ಹಾಗೂ ದೈಹಿಕ ಶಿಕ್ಷೆಯನ್ನು ತಪ್ಪಿಸಿ ಮಕ್ಕಳ ಹಕ್ಕುಗಳ ರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳು~ ಅಥವಾ `ಹಿಂದುಳಿದ ವರ್ಗಗಳ ಮಕ್ಕಳ ಅಭಿವೃದ್ಧಿಗಾಗಿ ಇರುವ ಯೋಜನೆಗಳು ಮತ್ತು ಅವುಗಳ ಪರಿಣಾಮಕಾರಿ ಜಾರಿಗಾಗಿ ಕ್ರಮಗಳು~ ಅಥವಾ `ನಗರ ಪರಿಸರದಲ್ಲಿ ವಾಸಿಸುತ್ತಿರುವ ಮಕ್ಕಳ ಪರಿಸ್ಥಿತಿಗಳು ಮತ್ತು ಹಕ್ಕುಗಳ ರಕ್ಷಣೆ~ ಈ ಮೂರು ವಿಷಯಗಳಲ್ಲಿ ಯಾವುದಾದರೂ ಒಂದು ವಿಚಾರದ ಕುರಿತು ಪ್ರಬಂಧವನ್ನು ರಚಿಸಿ ಜನವರಿ 15 ರೊಳಗಾಗಿ ಕಳುಹಿಸಿಕೊಡಬೇಕು.

ವಿಳಾಸ: ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ,  ಚೈಲ್ಡ್ ರೈಟ್ಸ್ ಟ್ರಸ್ಟ್,  4606,  6ನೇ ಮಹಡಿ, ಹೈ ಪಾಯಿಂಟ್ 4,  ಅರಮನೆ ರಸ್ತೆ,  ಬೆಂಗಳೂರು-01. 

ಪ್ರತಿಕ್ರಿಯಿಸಿ (+)