ಮಡಿಕೇರಿ: ಸರ್ವ ಶಿಕ್ಷಣ ಅಭಿಯಾನದಂತಹ ಪ್ರಮುಖ ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿನ ವಿಳಂಬ, ತಾತ್ಸಾರ ಮನೋಭಾವನೆಯಿಂದ ಮಕ್ಕಳ ಹಕ್ಕುಗಳನ್ನು ಸಂರಕ್ಷಿಸುವಲ್ಲಿ ನಾವು ವಿಫಲರಾಗುತ್ತಿದ್ದೇವೆ ಎಂದು ಕರ್ನಾಟಕ ಪತ್ರಿಕಾ ಅಕಾಡೆಮಿ ಅಧ್ಯಕ್ಷ ಡಿ.ಪಿ. ಪರಮೇಶ್ವರ ಗುರುವಾರ ವಿಷಾದಿಸಿದರು. ಕೊಡಗು ಜಿಲ್ಲಾ ಎಂಟನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಡೆದ ‘ಪ್ರಸ್ತುತ ಸವಾಲುಗಳು’ ಕುರಿತ ಎರಡನೇ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಮಕ್ಕಳ ಹಕ್ಕುಗಳ ಕ್ಲಬ್ಗಳನ್ನು ಪ್ರತಿ ಶಾಲೆಗಳಲ್ಲಿ ಸ್ಥಾಪಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದರೂ ಅನೇಕ ಶಾಲೆಗಳಿಗೆ ಇನ್ನೂ ಅದರ ಗಂಧವೇ ಗೊತ್ತಿಲ್ಲ’ ಎಂದು ವಿಷಾದಿಸಿದರು.

‘ಮಕ್ಕಳ ಹಕ್ಕುಗಳ ಉಲ್ಲಂಘನೆ ಕುರಿತು ರಾಜ್ಯ ಮಕ್ಕಳ ಹಕ್ಕುಗಳ ಆಯೋಗಕ್ಕೆ ನೂರಾರು ದೂರುಗಳು ಬರುತ್ತಿವೆ. ಈ ಪೈಕಿ ಉತ್ತರ ಕರ್ನಾಟಕದಿಂದಲೇ ಬರುವ ದೂರುಗಳ ಸಂಖ್ಯೆಯೇ ಹೆಚ್ಚಾಗಿವೆ’ ಎಂದರು. ‘ಪುರುಷ ಪ್ರಧಾನ ಸಮಾಜದಲ್ಲಿ ಪ್ರಸ್ತುತ ಮಹಿಳೆಯರಿಗೆ ಉದ್ಯೋಗ ಕ್ಷೇತ್ರದಲ್ಲಿ ಸಮಾನತೆ ಸಿಕ್ಕಿ ಆರ್ಥಿಕ ಸ್ವಾತಂತ್ರ್ಯ ದಕ್ಕಿದರೂ ‘ನೆಮ್ಮದಿ’ ಸಿಗುತ್ತಿಲ್ಲ ಎಂಬ ಕೂಗು ಇನ್ನೂ ಮುಂದುವರಿದಿದೆ. ಆದರೆ, ಕೆಲವು ವರ್ಷಗಳಿಂದೀಚೆಗೆ ಮಹಿಳೆ ಹೋರಾಟದ ಮೂಲಕ ಸಬಲೀಕರಣದತ್ತ ದಾಪುಗಾಲನ್ನಿಟ್ಟು ಸ್ವಾವಲಂಬಿ ಬದುಕು ಸಾಗಿಸುತ್ತಿದ್ದಾಳೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಮಕ್ಕಳ ಹಕ್ಕುಗಳು’ ಕುರಿತು ವಿಷಯ ಮಂಡಿಸಿದ ಮಡಿಕೇರಿ ಬಾಲಕರ ಬಾಲಮಂದಿರದ ಅಧೀಕ್ಷಕಿ ಮುಮ್ತಾಜ್, ‘ದೇಶದಲ್ಲಿ ಸುಮಾರು 11 ಕೋಟಿಯಷ್ಟು ಬಾಲಕಾರ್ಮಿಕರಿದ್ದಾರೆ. ಎಂದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ದಮಯಂತಿ ‘ಮಹಿಳಾ ಸಂಘಟನೆ’ ಕುರಿತು ವಿಷಯ ಮಂಡಿಸಿದರು. ವಿರಾಜಪೇಟೆ ತಾಲ್ಲೂಕು ಕಸಾಪ ಗೌರವ ಕಾರ್ಯದರ್ಶಿ ಬಿ.ಎಸ್. ದೇವರ್ ಸ್ವಾಗತಿಸಿದರು. ಮೂರ್ನಾಡು ಉಪನ್ಯಾಸಕಿ ಗೌರಿ ಕೃಷ್ಣಪ್ಪ ನಿರೂಪಿಸಿದರು. ಕುಶಾಲನಗರ ಹೋಬಳಿ ಕಸಾಪ ಗೌರವ ಕಾರ್ಯದರ್ಶಿ ಎಂ.ಇ. ಮೊಯಿದ್ದೀನ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.