ಭಾನುವಾರ, ಮೇ 22, 2022
27 °C

ಮಗು ತಾಯಿಯೊಂದಿಗೇ ನಿದ್ರಿಸಬೇಕು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್(ಪಿಟಿಐ): ಇದು ಪೋಷಕರು ಅತ್ಯಂತ ಗಮನವಿಟ್ಟು ಆಲಿಸಬೇಕಾದ ವಿಚಾರ. ಹುಟ್ಟಿದ ಮಗು ಮೂರು ವರ್ಷಗಳ ವರೆಗೆ ತಾಯಿಯ ಬೆಚ್ಚನೆಯ ಅಪ್ಪುಗೆಯಲ್ಲಿಯೇ ನಿದ್ರಿಸಬೇಕು. ಇಲ್ಲವಾದರೆ ಮಗು ಭವಿಷ್ಯದಲ್ಲಿ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾದೀತು ಎಂದು ಹೇಳುತ್ತದೆ ಹೊಸ ಸಂಶೋಧನೆ.ದಕ್ಷಿಣ ಆಫ್ರಿಕಾದ ಕೇಪ್‌ಟೌನ್ ವಿಶ್ವವಿದ್ಯಾಲಯದ ಡಾ.ನೀಲ್ಸ್ ಬ್ರಿಜ್‌ಮನ್ ನೇತೃತ್ವದ ಸಂಶೋಧಕರ ತಂಡ ಈ ಬಗ್ಗೆ ಅಧ್ಯಯನ ನಡೆಸಿದ್ದು, ತಾಯಿಯ ಜೊತೆ ಮಗು ನಿದ್ರಿಸದಿದ್ದರೆ ಮಗುವಿನ ಹೃದಯದ ಮೇಲೆ ಹೆಚ್ಚಿನ ಒತ್ತಡ ಉಂಟಾಗಲಿದೆ ಎಂದು ಹೇಳಿದೆ.ಅಮ್ಮನ ಹಿತವಾದ ಸಾಮೀಪ್ಯದಲ್ಲಿ ನಿದ್ರಿಸಿದರೆ ಮಗುವಿನ ಮೆದುಳು ಬೆಳವಣಿಗೆ ಹೊಂದುತ್ತದೆ. ಒಂದು ವೇಳೆ ತಾಯಿಯಿಂದ ಬೇರ್ಪಟ್ಟು ನಿದ್ರಿಸಿದರೆ ಮೆದುಳಿನಲ್ಲಿ ದೋಷಗಳು ಕಾಣಿಸಿಕೊಳ್ಳಲಿದೆ. ಅಲ್ಲದೇ ವರ್ತನೆಯಲ್ಲಿ ಸಮಸ್ಯೆಗಳು ಉಂಟಾಗಲಿವೆ ಎಂದು ಸಂಶೋಧಕರು ತಿಳಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.