ಗುರುವಾರ , ಮಾರ್ಚ್ 4, 2021
29 °C
ಭೀಮಾ ತೀರದಲ್ಲಿ ಮತ್ತೆ ರಕ್ತಪಾತ

ಮಚ್ಚಿನಿಂದ ಹಲ್ಲೆ: ಒಬ್ಬ ಆಸ್ಪತ್ರೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಚ್ಚಿನಿಂದ ಹಲ್ಲೆ: ಒಬ್ಬ ಆಸ್ಪತ್ರೆಗೆ

ಸಿಂದಗಿ (ವಿಜಾಪುರ ಜಿಲ್ಲೆ): ತಾಲ್ಲೂಕಿನ ಭೀಮಾ ತೀರದ ದೇವಣ ಗಾಂವ –ಆಲಮೇಲ ಮಧ್ಯೆ ಬುಧವಾರ ಹಾಡಹಗಲೇ ಮತ್ತೆ ರಕ್ತಪಾತದ ಘಟನೆ ಸಂಭವಿಸಿದೆ.ದೇವಣಗಾಂವ ಗ್ರಾಮದ ಪರಶುರಾಮ ಪೀರಪ್ಪ ಕುರುಮಲ್ (35) ಮಚ್ಚಿನಿಂದ ತೀವ್ರವಾಗಿ ಗಾಯ ಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.ದೇವಣಗಾಂವದಿಂದ ಬೈಕ್ ಮೇಲೆ ಹೊರಟಿದ್ದ ಪರಶುರಾಮ ಅವರ ಮೇಲೆ  ಗುಂಪೊಂದು ದಾಳಿ ನಡೆಸಿ ಮಚ್ಚಿನಿಂದ ಹೊಡೆಯಲೆತ್ನಿಸಿದಾಗ, ಪರಶುರಾಮ ತಪ್ಪಿಸಿಕೊಂಡು ಕಬ್ಬಿನ ತೋಟದಲ್ಲಿ ಓಡಿ ಹೋಗುತ್ತಿ ದ್ದಂತೆಯೇ ಬೆನ್ನಟ್ಟಿ ಮಚ್ಚಿನಿಂದ ಹಲ್ಲೆ ನಡೆಸಲಾಗಿದೆ.ದೇವಣಗಾಂವ ಗ್ರಾಮದ ದಲಿತ ಮುಖಂಡ ರಮೇಶ ದಾನಣ್ಣನವರ ಕೊಲೆ ಪ್ರಕರಣ ಮತ್ತು ಅದೇ ಗ್ರಾಮದ ಗಂಗಾಮತಸ್ಥ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶರಣಪ್ಪ ಕಣಮೇಶ್ವರ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣದಲ್ಲಿ ಪರಶುರಾಮ ಕುರುಮಲ್ ಆರೋಪಿಯಾಗಿದ್ದಾನೆ ಎನ್ನಲಾಗಿದೆ.ಹಲ್ಲೆ ಮಾಡಿದ ಗುಂಪಿನ ಜನರನ್ನು ಪರಶುರಾಮ ಗುರುತಿಸಿದ್ದು, ಪೊಲೀಸರು ಒಂಬತ್ತು ಜನರ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆಲಮೇಲ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.