ಹೂವಿನಹಡಗಲಿ: ಮಠಗಳು ಶೋಷಿತರಪರವಾಗಿ ಕೆಲಸಮಾಡಬೇಕು. ಸ್ವಾಮೀಜಿಗಳು ಜನ ಸೇವೆ ಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಜನಮಾನಸದಲ್ಲಿ ಉಳಿಯುವಂತಾಗಬೇಕುಎಂದು ಕೊಪ್ಪಳದ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

ಪಟ್ಟಣದ ಗವಿಮಠದ ನೂತನ ಶ್ರೀಗಳ ಪಟ್ಟಾಧಿಕಾರದ ಪೀಠಾರೋಹಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಸ್ವಾಮಿಗಳಿಗೆ ಸಮಜದ ಜವಾಬ್ದಾರಿಯಿದೆ. ಸಮಾಜವನ್ನು ಸುಧಾರಣೆ ಮಾಡುವ ಮೂಲಕ ಶಾಂತ ಜೀವನಕ್ಕೆ ಅವಕಾಶ ಮಾಡಬೇಕಾಗಿದೆ ಎಂದರು.

ಲಿಂಗನಾಯಕನಹಳ್ಳಿಯ ಚನ್ನವೀರಸ್ವಾಮೀಜಿ ಪಂಪಯ್ಯ ದೇವರಿಗೆ ಷಟಸ್ಥಲ ಬ್ರಹ್ಮೋಪದೇಶ ನೀಡಿದರು. ಪಂಪಯ್ಯ ದೇವರ ಹೆಸರನ್ನು ಹಿರಿಶಾಂತವೀರ ಸ್ವಾಮೀಜಿ ಎಂದು ಮರುನಾಮಕರಣ ಮಾಡಲಾಯಿತು.

ಹಂಪಿ ವಿಶ್ವವಿದ್ಯಾಲಯದ ಕುಲಪತಿ ಡಾ.ಮುರಿಗೆಪ್ಪ ಮಾತನಾಡಿದರು. ನೀಲಗುಂದದ ಚನ್ನಬಸವಸ್ವಾಮೀಜಿ, ಗುತ್ತಲದ ಸಂಗನಬಸವ ಸ್ವಾಮೀಜಿ, ಕಾಲ್ವಿತಾಂಡಾ ತಿಪ್ಪೇರುದ್ರಸ್ವಾಮೀಜಿ ಹರ-ಗುರು ಚರಮೂರ್ತಿಗಳು ಮತ್ತಿತರರು ಉಪಸ್ಥಿತರಿದ್ದರು.

ಪ್ರೊ.ಶಾಂತಮೂರ್ತಿ ಕುಲಕರ್ಣಿ ಸಂಪಾದಿಸಿದ ಬಯಲ-ಬೆಳಗು ಸ್ಮರಣ ಸಂಚಿಕೆಯನ್ನು ಕೊಪ್ಪಳದ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಬಿಡುಗಡೆ ಮಾಡಿದರು.
ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ. ಪ್ರಕಾಶರ ಅವರ ಅಗಲಿಕೆಯಿಂದಾಗಿ ಕಾರ್ಯಕ್ರಮದ ವಿಚಾರ ಸಂಕಿರಣ, ಗೋಷ್ಠಿಗಳನ್ನು ರದ್ದುಗೊಳಿಸಲಾಗಿತ್ತು. ಕಾರ್ಯಕ್ರಮ ಆರಂಭವಾಗುವ ಮೊದಲು ಗಣ್ಯರು ಎಂ.ಪಿ. ಪ್ರಕಾಶರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.