ಶುಕ್ರವಾರ, ಜೂನ್ 25, 2021
29 °C

ಮತದಾನಕ್ಕೆ ಬಿಗಿಭದ್ರತೆ; ಬಂದೋಬಸ್ತ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ಭಾನುವಾರ ನಡೆಯಲಿರುವ ಲೋಕ ಸಭಾ ಉಪ ಚುನಾವಣೆಗೆ ಸರ್ವ ಸಿದ್ಧತೆ ಮಾಡಲಾಗಿದ್ದು, ಬಿಗಿ ಭದ್ರತೆ ಒದಗಿಸಲಾಗಿದೆ.ಕೊಪ್ಪ:ಮತಯಂತ್ರ ಸಾಗಣೆ

ಕೊಪ್ಪ:
ಇಲ್ಲಿನ ಪ್ರಥಮ ದರ್ಜೆ ಕಾಲೇಜಿನಿಂದ ಶೃಂಗೇರಿ ವಿಧಾನ ಸಭಾ ಕ್ಷೇತ್ರದ 217 ಮತಗಟ್ಟೆಗಳಿಗೆ ಶನಿವಾರ ಮತಯಂತ್ರ ಸಾಗಿಸಲಾಯಿತು.ಬೇರೆ ಬೇರೆ ತಾಲ್ಲೂಕುಗಳಿಂದ ಆಗಮಿಸಿದ್ದ ಚುನಾವಣಾ ಸಿಬ್ಬಂದಿಗೆ ಬೆಳಿಗ್ಗೆ 9 ಗಂಟೆಯಿಂದಲೆ ಮತಯಂತ್ರ ಗಳ ವಿತರಣೆ ನಡೆಯಿತು.ಸಹಾಯಕ ಚುನಾವಣಾಧಿಕಾರಿ ಜಗದೀಶ್, ತಹಶೀಲ್ದಾರ್ ಲಿಂಗಪ್ಪ ಗೌಡ ಮಾರ್ಗದರ್ಶನ ನೀಡಿದರು. ರಾಜ್ಯ ಸಾರಿಗೆ, ಸಹಕಾರ ಸಾರಿಗೆ ಹಾಗೂ ಸರ್ಕಾರಿ ವಾಹನಗಳಲ್ಲಿ ಮತ ಯಂತ್ರಗಳನ್ನು ಬಿಗಿ ಬಂದೊಬಸ್ತ್‌ನಲ್ಲಿ ಮತಗಟ್ಟೆಗಳಿಗೆ ಸಾಗಿಸ ಲಾಯಿತು.ಗೊಂದಲಕ್ಕೀಡಾದ ಸಿಬ್ಬಂದಿ

ಮೂಡಿಗೆರೆ:
ಪಟ್ಟಣದ ಡಿ.ಎಸ್.ಬಿಳೀಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಚುನಾವಣೆ ಸಿದ್ಧತೆ ಮುಗಿದು ಸಿಬ್ಬಂದಿ ತಮ್ಮ ಭಾಗದ ಮತಯಂತ್ರ ತೆಗೆದುಕೊಂಡು ತೆರಳ ಬೇಕು ಎನ್ನುವಷ್ಟರಲ್ಲಿ ಮಧ್ಯಾಹ್ನ ಮತ ಯಂತ್ರ ಸಾಗಿಸಬೇಕಾದ ಬಸ್ ಅಪ ಘಾತಕ್ಕೀಡಾಗಿ ಸಿಬ್ಬಂದಿ ಗೊಂದಲ ಕ್ಕೊಳಗಾದರು.ಮೂಡಿಗೆರೆ ಘಟಕದ ಬಸ್ ವಿದ್ಯಾ ನಗರದ  ಗುರುಸಿದ್ದಪ್ಪ ಮತ್ತು ರೇಣುಕಮ್ಮ ದಂಪತಿ ಬೈಕ್‌ಗೆ ಡಿಕ್ಕಿಹೊಡೆದ ನಂತರ ಆಕ್ರೋಶಗೊಂಡ ಸಾರ್ವ ಜನಿ ಕರು ರಸ್ತೆ ತಡೆ ನಡೆಸಿದ್ದರಿಂದ  ಚುನಾ ವಣಾ ಕಾರ್ಯಕ್ಕೆ ತೆರಳಬೇಕಿದ್ದ ಸಿಬ್ಬಂದಿ 2 ಗಂಟೆ  ವಿಳಂಬವಾಗಿ ತೆರಳ ಬೇಕಾಯಿತು. ಇದರಿಂದ ನೊಂದ ಸಿಬ್ಬಂದಿ ಈ ಚುನಾವಣೆ ಸಹವಾಸ ಸಾಕು ಎನ್ನುತ್ತಿದ್ದ ಮಾತುಗಳು ಕೇಳಿ ಬರುತ್ತಿದ್ದವು.ಶೃಂಗೇರಿ: 49 ಮತಗಟ್ಟೆ

ಶೃಂಗೇರಿ: ಉಡುಪಿ -ಚಿಕ್ಕಮಗಳೂರು ಲೋಕಸಭಾ ಉಪ ಚುನಾವಣೆ ನೇಮಕ ವಾದ ಸಿಬ್ಬಂದಿ ತಾಲ್ಲೂಕು ಕಚೇರಿ ಯಲ್ಲಿ ಶನಿವಾರ ಎಲೆಕ್ಟ್ರಾನಿಕ್ ಮತ ಯಂತ್ರ ಹಾಗೂ ಅಗತ್ಯ ಸಲಕರಣೆ ಯೊಂದಿಗೆ ವಿವಿಧ ಮತಗಟ್ಟೆಗಳಿಗೆ ತೆರಳಿದರು.ತಾಲ್ಲೂಕಿನ ಒಟ್ಟು 49 ಮತಗಟ್ಟೆ ಗಳಲ್ಲಿ ತಲಾ 5  ಸಿಬ್ಬಂದಿ ನಿಯುಕ್ತಿಗೊಳಿಸಲಾಗಿದೆ. ಕಿಗ್ಗ ಮತ್ತು ಮರ್ಕಲ್ ಹೋಬಳಿಗೆ ತಲಾ ಒಂದರಂತೆ ಮೊಬೈಲ್ ಯುನಿಟ್‌ಗಳು ಮತ್ತು ಎಲೆಕ್ಟ್ರಾನಿಕ್ ಮತಯಂತ್ರ ದುರಸ್ತಿಗೆ ಒಂದು ವಾಹನವನ್ನು ಮೀಸಲಿಡಲಾಗಿದೆ.ತಾಲ್ಲೂಕಿನ 23 ಮತಗಟ್ಟೆಗಳನ್ನು ಅತಿಸೂಕ್ಷ್ಮ ಎಂದು ಗುರುತಿಸಲಾಗಿದ್ದು ತಾಲ್ಲೂಕಿನ ನಕ್ಸಲ್‌ಪೀಡಿತ ಮತಗಟ್ಟೆಗಳಿಗೆ ತಲಾ 20 ಕೇಂದ್ರ ಮೀಸಲು ದಳದ ಯೋಧರು ಹಾಗೂ ಐವರು ಪೊಲೀಸರನ್ನು ನೇಮಿಸಲಾಗಿದೆ.`ಮತಗಟ್ಟೆಗೆ ಜೀಪ್ ವ್ಯವಸ್ಥೆ~

ತರೀಕೆರೆ:
ತರೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ  ಉಡುಪಿ-ಚಿಕ್ಕಮಗಳೂರು ಲೋಕಸಭಾ ಉಪ ಚುನಾವಣೆ ಶಾಂತಯುತವಾಗಿ ನಡೆಸಲು ತಾಲ್ಲೂಕು ಆಡಳಿತ ಸಕಲ ಸಿದ್ಧತೆ ಮಾಡಿದೆ.

ಮತದಾನದ ಸ್ಥಳಕ್ಕೆ ತೆರಳಲು 39 ಸಾರಿಗೆ ಬಸ್‌ಗಳು ಮತ್ತು ತಾಲ್ಲೂಕಿನ ವಿವಿಧ ಇಲಾಖೆಯ ವಾಹನವನ್ನು ಬಳಸಿಕೊಳ್ಳಲಾಗಿದ್ದು, ಬಸ್ ಸಂಚರಿಸದ 9 ಮತಗಟ್ಟೆಗಳಿಗೆ ಚುನಾವಣ ಸಿಬ್ಬಂದಿ ತಲುಪಿಸಲು ಜೀಪ್ ವ್ಯವಸ್ಥೆಯನ್ನು ಮಾಡಲಾಗಿದೆ.928 ಸಿಬ್ಬಂದಿ ಚುನಾವಣೆ ಪ್ರಕ್ರಿಯೆಯಲ್ಲಿ ತೊಡಗಿಸಿದ್ದು, 180 ಜನ ಮೈಕ್ರೊ ವೀಕ್ಷಕರನ್ನು ನಿಯೋಜಿಸಲಾಗಿದೆ. ಇವೆಲ್ಲವನ್ನು ನಿಭಾಯಿಸಲು 18 ಅಧಿಕಾರಿಗಳನ್ನು ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ.ಪೊಲೀಸ್ ಇಲಾಖೆಯು ಡಿವೈಎಸ್‌ಪಿ, 7 ಜನ ಇನ್‌ಸ್ಪೆಕ್ಟರ್, 14 ಜನ ಸಬ್ ಇನ್‌ಸ್ಪೆಕ್ಟರ್, 27 ಸಹಾಯಕ ಸಬ್ ಇನ್‌ಸ್ಪೆಕ್ಟರ್, ಮತ್ತು 250 ಜನ ಹೋಂ ಗಾರ್ಡ್ ನಿಯೋಜಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.