ಕೊಪ್ಪಳ: ‘ಬನ್ನಿರಿ, ಬನ್ನಿರಿ ಮತದಾರರೆ, ನಮ್ಮೀ ನಾಡಿನ ಭಾಗೀದಾರರೆ,
ನಾವು, ನೀವು ಕೂಡಿ ನಡೆಯೋಣ, ಮತದಾನದ ಮಹತ್ವ ಅರಿಯೋಣ...

–ಬೆಳಿಗ್ಗೆ ನಗರದಲ್ಲಿ ಈ ‘ಸುಪ್ರಭಾತ’ ಮೊಳಗುತ್ತದೆ. ನಗರಸಭೆಯ ಕಸ ಸಾಗಿಸುವ ವಾಹನ, ಸರ್ಕಾರಿ ವಾಹನಗಳ ಧ್ವನಿವರ್ಧಕಗಳಲ್ಲಿ ಇಂಥ ಹಾಡುಗಳನ್ನು ಕೇಳಬಹುದು.

18 ತುಂಬಿದ ಹದಿ ಹರೆಯದವರೆ, ನಾಡ ನಾಳಿನ ವಾರಸುದಾರರೆ, ಕಣ್ಣಲ್ಲಿ ಕನಸು, ಮೈಯಲ್ಲಿ ಹುರುಪು, ಕೇಳಿರಿ ಸಂವಿಧಾನದ ಕರೆಯ ಅರಿಯಿರಿ ದೇಶ ಕಟ್ಟುವ ಪರಿಯ...

ಮತದಾರರಲ್ಲಿ ಜಾಗೃತಿ ಮೂಡಿಸಿ ಮತ ಚಲಾಯಿಸುವಂತೆ ಮಾಡಲು ಜಿಲ್ಲಾಮಟ್ಟದ ‘ಸ್ವೀಪ್’ ಸಮಿತಿ ಕೈಗೊಂಡ ಹಲವು ತಂತ್ರಗಳಲ್ಲಿ ಇದೂ ಒಂದು. ಈ ಸಮಿತಿಯವರು ಮನೆ ಮನೆಗೆ ಹೋಗಿ ಬೂತ್ಮಟ್ಟದ ಅಧಿಕಾರಿಗಳು ಮತದಾರರ ಗುರುತಿನ ಚೀಟಿ, ಕರಪತ್ರ ನೀಡುವುದು, ಕಾಲೇಜುಗಳಲ್ಲಿ ಮತದಾನದ ಬಗ್ಗೆ ಪ್ರತಿಜ್ಞಾವಿಧಿ ಬೋಧಿಸುವ ಕಾರ್ಯಕ್ರಮ ನಡೆಸಿದರು.

ಇದೀಗ ಸಂಗೀತದ ಮಾರ್ಗ ಹಿಡಿದಿದ್ದಾರೆ. ವಾರ್ತಾ ಇಲಾಖೆಯು ‘ಮತದಾರರ ಜಾಗೃತಿ ಆಶಯ ಗೀತೆಗಳು’ ಎಂಬ ಗೀತ ಗುಚ್ಛ ಸಿದ್ಧಪಡಿಸಿ, ಬಿಡುಗಡೆಗೊಳಿಸಿದೆ. ಮತದಾನ ಮಾಡಲು ಸೋಮಾರಿತನ ತೋರುವವರನ್ನು ಎಚ್ಚರಿಸಿ, ಅವರಲ್ಲಿ ಮತದಾನಕ್ಕೆ ಸ್ಫೂರ್ತಿ ತುಂಬುವ ಯತ್ನ ಇದೀಗ ನಿರಂತರವಾಗಿ ನಡೆಯುತ್ತಿದೆ.

ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಕಡಿಮೆ ಮತದಾನ ಪ್ರಮಾಣವಾಗಿರುವ ಪ್ರದೇಶಗಳನ್ನು ಗುರುತಿಸಿ, ಅಂತಹ ಪ್ರದೇಶಗಳ ಮತದಾರರಿಗೆ ಮತ ಚಲಾವಣೆಗೆ ಇರುವ ತೊಂದರೆಯೇನು ಎಂಬುದನ್ನು ಅರಿತು ಅದನ್ನು ನಿವಾರಿಸುವ ಕಾರ್ಯವೂ ಸಾಗಿದೆ.

ಮತದಾರರಲ್ಲಿ ಜಾಗೃತಿ ಗೀತೆಗಳಿಗೆ ಖ್ಯಾತ ಸಂಗೀತ ನಿರ್ದೇಶಕ ವಿ. ಮನೋಹರ್ ಸಂಗೀತ ನೀಡಿದ್ದಾರೆ. ಕೆ.ವೈ. ನಾರಾಯಣಸ್ವಾಮಿ ಹಾಗೂ ವಾರ್ತಾ ಇಲಾಖೆಯ ನಿರ್ದೇಶಕರಾದ ಎನ್.ಆರ್. ವಿಶುಕುಮಾರ್ ಅವರು ಸಾಹಿತ್ಯ ಬರೆದಿದ್ದಾರೆ. 4 ಹಾಡುಗಳನ್ನು ಒಳಗೊಂಡ ಈ ಗೀತ ಗುಚ್ಛದಲ್ಲಿ ಸರಿ ಸುಮಾರು ಎಲ್ಲವೂ 4ರಿಂದ 5 ನಿಮಿಷಗಳ ಅವಧಿಯವು.

ಈ ಪೈಕಿ ಮೊದಲನೆ ಹಾಡು ‘ಎಚ್ಚರಗೊಳ್ಳಿ ಪ್ರಜೆಗಳೆ..’ ಹಾಡಂತೂ, ಮತದಾನಕ್ಕೂ ಆಲಸ್ಯತನ ತೋರುವವರನ್ನು ಎಚ್ಚರಿಸುವಂತಿದೆ. ಯುವ ಪೀಳಿಗೆಯನ್ನು ಮತಗಟ್ಟೆಗೆ ಸೆಳೆಯಲು ‘18 ತುಂಬಿದ ಹದಿ ಹರೆಯದವರೆ...’ ಹಾಡು ದೇಶ ಕಟ್ಟುವಲ್ಲಿನ ಅವರ ಪಾತ್ರ ಬಿಂಬಿಸುತ್ತದೆ. ಮತದಾರರ ಜಾಗೃತಿಗಾಗಿ ರಚಿಸಲಾಗಿರುವ ಈ ಎಲ್ಲ ಹಾಡುಗಳು ಅತ್ಯಂತ ಪರಿಣಾಮಕಾರಿಯಾಗಿವೆ.

ಮತದಾರರ ಜಾಗೃತಿ ಆಶಯ ಗೀತೆಗಳನ್ನು ನಗರಸಭೆ, ಪುರಸಭೆಗಳ ವಾಹನಗಳಿಗೆ ಅಳವಡಿಸುವುದು, ಸೇರಿದಂತೆ ಅನೇಕ ಮಾಧ್ಯಮಗಳ ಮೂಲಕ ಮತದಾರರಲ್ಲಿ ಅರಿವು ಮೂಡಿಸಲು ಯೋಜಿಸಲಾಗಿದೆ. ಮತದಾರರು, ನಿರ್ಭೀತರಾಗಿ, ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೆ, ಮತದಾನ ಮಾಡಿ, ತಮ್ಮ ಹೊಣೆ ನಿಭಾಯಿಸಬೇಕು ಎಂದು ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂರಾವ್ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.