ಶನಿವಾರ, ಜೂನ್ 12, 2021
24 °C
ಅಭ್ಯರ್ಥಿಗಳು ಯೋಗ್ಯರಲ್ಲ ಎನಿಸಿದರೆ ‘ನೋಟಾ’ ಬಳಸಿ

ಮತದಾರರಿಗೆ ಅಣ್ಣಾ ಹಜಾರೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಳೇಗಣಸಿದ್ಧಿ, ಮಹಾರಾಷ್ಟ್ರ (ಪಿಟಿಐ): ಲೋಕಸಭಾ ಚುನಾವ­ಣೆಯ ಮತದಾನ ಸಂದರ್ಭದಲ್ಲಿ ಅಭ್ಯರ್ಥಿ­ಗಳ ಪೈಕಿ ಯಾರೂ ಯೋಗ್ಯರಲ್ಲ ಎನಿಸಿದರೆ ಮತಚೀಟಿಯ ಕೊನೆಯಲ್ಲಿ ಇರುವ ‘ಮೇಲಿನವರು ಯಾರೂ ಅಲ್ಲ’­ (ನೋಟಾ) ಎಂಬು­ದರ ಮುಂದೆ ಮತ ಮುದ್ರೆ ಒತ್ತುವಂತೆ ಭ್ರಷ್ಟಾಚಾರ ಆಂದೋಲನದ ಮುಖ್ಯಸ್ಥ ಅಣ್ಣಾ ಹಜಾರೆ ಅವರು ಮತದಾರರಿಗೆ ಕರೆ ನೀಡಿದ್ದಾರೆ.ಆಡಳಿತದಲ್ಲಿ ಇರುವ ಪಕ್ಷವನ್ನು ಬದಲಾ­ಯಿಸಿದ ತಕ್ಷಣ ದೇಶದಲ್ಲಿ ಬದಲಾ­­­ವಣೆ ಬರುವುದಿಲ್ಲ. ಭ್ರಷ್ಟಾ­ಚಾರ ವಿಚಾರದಲ್ಲಿ ಒಂದು ಪಕ್ಷ ಸ್ನಾತಕ ಪದವಿ ಪಡೆದಿದ್ದರೆ ಇನ್ನೊಂದು ಪಕ್ಷ ಸ್ನಾತ­ಕೋತ್ತರ ಪದವಿ ಪಡೆದಿ­ರುತ್ತದೆ. ಆದ್ದ­ರಿಂದ ತಲಸ್ಪರ್ಶಿ ಬದಲಾವಣೆಗೆ ವಿಧಾನ­­ಸಭೆ ಮತ್ತು ಲೋಕಸಭೆಗೆ ಪ್ರಾಮಾ­ಣಿಕ ಮತ್ತು ಯೋಗ್ಯ ಅಭ್ಯರ್ಥಿ­ಗಳನ್ನು ಆಯ್ಕೆ ಮಾಡಬೇಕು ಎಂದು ಹಜಾರೆ ಸಲಹೆ ಮಾಡಿದ್ದಾರೆ.ರಾಜಕೀಯ ಪಕ್ಷಗಳು ಗೂಂಡಾ, ಭ್ರಷ್ಟ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಮತದಾರರು ಅಂತಹವ­ರನ್ನು ತಿರಸ್ಕರಿಸ­ಬೇಕು ಮತ್ತು ಯಾವುದೇ ಆಮಿಷಗಳಿಗೆ ಬಲಿಯಾಗ­ಬಾರದು ಎಂದು ಹೇಳಿಕೆ­ಯಲ್ಲಿ ತಿಳಿಸಿ­ದ್ದಾರೆ. ಜಾಗೃತ ಮತದಾ­ರರೇ ಪ್ರಜಾಪ್ರ­ಭು­ತ್ವದ ಆಧಾರಸ್ತಂಭ, ಆದ್ದರಿಂದ ಈ ಬಾರಿ ಮತದಾರರು ಸೂಕ್ತ ಅಭ್ಯರ್ಥಿ ಇಲ್ಲದಿದ್ದಲ್ಲಿ ‘ಮೇಲಿನ­ವರು ಯಾರೂ ಅಲ್ಲ’ ಎಂಬ ಆಯ್ಕೆ­ಯನ್ನು ಅನುಸರಿಸ­ಬೇಕು ಎಂದು ಹಜಾರೆ ಹೇಳಿದ್ದಾರೆ. ಅನ್ಯಾಯಕ್ಕೆ ಒಳಗಾದಾಗ ಮತದಾ­ರರು ಚುನಾ­ವಣೆ­ಯಲ್ಲಿ ರಾಜಕಾರಣಿ­ಗಳಿಗೆ ಪಾಠ ಕಲಿಸುವ ಮಾತನಾಡು­ತ್ತಾರೆ. ಆದರೆ ಹಣ, ಹೆಂಡದ ಆಮಿಷ ಒಡ್ಡಿದಾಗ ಅದನ್ನು ಮರೆತು­ಬಿಡು­ತ್ತಾರೆ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.