ಶುಕ್ರವಾರ, ಜೂನ್ 18, 2021
21 °C
ಕೇರಳ ಮಹಿಳೆಯರು

ಮತಪಟ್ಟಿಯಲ್ಲಿ ಮುಂದೆ, ಸಂಸತ್‌ನಲ್ಲಿ ಹಿಂದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿರುವನಂತಪುರ (ಪಿಟಿಐ): ಕೇರಳದ ಮತದಾರರ ಪಟ್ಟಿಯಲ್ಲಿ ಪುರುಷರಿಗಿಂತ ಹೆಚ್ಚು ಸಂಖ್ಯೆಯಲ್ಲಿ ಮಹಿಳೆಯರಿದ್ದಾರೆ. ಆದರೆ ಲೋಕಸಭೆ ಚುನಾವಣೆ ಗೆದ್ದು ಸಂಸತ್‌ ಪ್ರವೇಶಿಸುವ ವಿಷಯದಲ್ಲಿ ಮಾತ್ರ ಅವರಿಗೆ ಅಂತಹ ಅದೃಷ್ಟ ಇಲ್ಲ.ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಮತ್ತು ಸಿಪಿಎಂ ನೇತೃತ್ವದ ಎಲ್‌ಡಿಎಫ್‌ 2009ರ ಲೋಕಸಭೆ ಚುನಾವಣೆಯಲ್ಲಿ ಕೆಲವು ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಟಿಕೆಟ್ ನೀಡಿವೆ. ಆದರೆ ಅವರು ಯಾರೂ ಗೆಲ್ಲಲಿಲ್ಲ. ಹಾಗಾಗಿ 2009ನೇ ಲೋಕಸಭೆಯಲ್ಲಿ ಕೇರಳವನ್ನು ಪ್ರತಿನಿಧಿಸುವ ಸಂಸದೆಯೇ ಇರಲಿಲ್ಲ.ಸಾಕ್ಷರತೆ ಮತ್ತು ಸಾಮಾಜಿಕ ಅಭಿವೃದ್ಧಿಯಲ್ಲಿ ಶ್ಲಾಘನಾರ್ಹ ದಾಖಲೆ ಹೊಂದಿರುವ ಕೇರಳಕ್ಕೆ ಇದು ಶೋಭೆ ತರುವುದಿಲ್ಲ ಎಂದು ಪಕ್ಷಭೇದ ಮರೆತು ಮಹಿಳಾ ರಾಜಕಾರಣಿಗಳು ಹೇಳುತ್ತಾರೆ.  1952ರಿಂದ ಈವರೆಗೆ ಕೇರಳದಿಂದ ಲೋಕಸಭೆಗೆ ಹೋದವರು 7 ಮಹಿಳೆಯರು ಮಾತ್ರ.ಮಹಿಳೆಯರು ಪಕ್ಷಕ್ಕೆ ಎಷ್ಟೇ ಸೇವೆ ಸಲ್ಲಿಸಿದರೂ ಮುಖ್ಯವಾಹಿನಿಯ ಪಕ್ಷಗಳು ಚುನಾವಣಾ ರಾಜಕೀಯದಲ್ಲಿ ಮಹಿಳೆಯರಿಗೆ ಅರ್ಹವಾಗಿ ದೊರೆಯಬೇಕಾದ ಸ್ಥಾನವನ್ನು ನೀಡಿಯೇ ಇಲ್ಲ ಎಂದು ಕೇರಳ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಬಿಂದು ಕೃಷ್ಣ ಅತೃಪ್ತಿ ವ್ಯಕ್ತಪಡಿಸುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.