ವಿಜಾಪುರ: ಕೇಂದ್ರದ ರೈಲ್ವೆ ಬಜೆಟ್ ಈ ಬಾರಿಯೂ ವಿಜಾಪುರ ಜಿಲ್ಲೆಗೆ ನಿರಾಶೆಯನ್ನೇ ತಂದಿದೆ. ವಿಜಾಪುರದಿಂದ ಬೆಂಗಳೂರಿಗೆ ನೇರ ರೈಲು ಸೌಲಭ್ಯ ಕಲ್ಪಿಸಬೇಕು ಎಂಬ ಈ ಭಾಗದ ಜನತೆಯ ಬೇಡಿಕೆಗೆ ಸ್ವಾತಂತ್ರ್ಯ ದೊರೆತು ಅರ್ಧ ಶತಮಾನ ಗತಿಸಿದರೂ ಯಾವುದೇ ಸ್ಪಂದನೆ ದೊರೆತಿಲ್ಲ.

ವಿಜಾಪುರ ಐತಿಹಾಸಿಕ ಪ್ರವಾಸಿ ತಾಣ. ಆದರೆ, ರೈಲು ಹಾಗೂ ವಿಮಾನ ಸಂಪರ್ಕ ಕೊರತೆಯಿಂದ ಪ್ರವಾಸೋದ್ಯಮಕ್ಕೆ ಹಿನ್ನಡೆಯಾಗುತ್ತಿದೆ ಎಂಬುದು ಈ ಭಾಗದ ಜನತೆಯ ಕೊರಗು.

ವಿಜಾಪುರದಿಂದ ಬೆಂಗಳೂರು ನಗರ ರೈಲ್ವೆ ನಿಲ್ದಾಣಕ್ಕೆ ನೇರ ರೈಲು ಸೌಲಭ್ಯವೇ ಇಲ್ಲ. ಯಶವಂತಪೂರಕ್ಕೆ ಎರಡು ರೈಲುಗಳು ಸಂಚರಿಸುತ್ತಿದ್ದರೂ ಅವುಗಳ ಸಮಯ ಪ್ರಯಾಣಿಕರಿಗೆ ಸರಿ ಹೊಂದುತ್ತಿಲ್ಲ. ಸಂಜೆ 5ಕ್ಕೆ ಇಲ್ಲಿಂದ ಹೊರಡುವ ಬಾಗಲಕೋಟೆ-ಯಶವಂತಪೂರ ರೈಲು ಮೂರು ರಾಜ್ಯ ಸುತ್ತಿ ಯಶವಂತಪೂರ ಸೇರುವುದು ಮರುದಿನ ಬೆಳಿಗ್ಗೆ 9ರ ನಂತರವೇ. ವಿಜಾಪುರದಿಂದ ಸಂಜೆ 5.45ಕ್ಕೆ ಹೊರಡುವ ಇನ್ನೊಂದು ರೈಲು ಯಶವಂತಪೂರ ತಲುಪುವುದು ಬೆಳಿಗ್ಗೆ 11ರ ನಂತರ.

`ವಿಜಾಪುರವನ್ನು ರಾತ್ರಿ 8ಕ್ಕೆ ಬಿಟ್ಟು ಬೆಳಿಗ್ಗೆ 8ಗಂಟೆಯ ಹೊತ್ತಿಗೆ ಬೆಂಗಳೂರು ತಲುಪುವಂತೆ ಹೊಸ ರೈಲು ಓಡಿಸಬೇಕು ಎಂಬುದು ಸ್ವಾತಂತ್ರ್ಯ ಪೂರ್ವದಿಂದಲೂ ಇರುವ ಬೇಡಿಕೆಗೆ ಸ್ಪಂದನೆ ಸಿಕ್ಕಿಲ್ಲ. ಇದು ಈ ಭಾಗದ ದುರ್ದೈವ~ ಎನ್ನುತ್ತಾರೆ ಬಸವನ ಬಾಗೇವಾಡಿ ತಾಲ್ಲೂಕು ಗೂಗಿಹಾಳದ ಎಸ್.ಎಸ್. ಪಾಟೀಲ.
`ಹಣ-ಜಮೀನು ಕೊಡ್ತೀವಿ, ಯೋಜನೆ ಕೊಡಿ ಎಂದು ನಮ್ಮ ರಾಜ್ಯ ಸರ್ಕಾರ ಹೇಳಿದರೂ ಕೇಂದ್ರ ಸ್ಪಂದಿಸಿಲ್ಲ. ಈ ಬಜೆಟ್ ವಿಜಾಪುರ ಜಿಲ್ಲೆ ಮತ್ತು ನಮ್ಮ ರಾಜ್ಯಕ್ಕೆ ತೃಪ್ತಿದಾಯಕವಾಗಿಲ್ಲ~ ಎಂಬುದು ಸಂಸದ ರಮೇಶ ಜಿಗಜಿಣಗಿ ಅವರ ಅಸಮಾಧಾನ.

`ಈ ಭಾಗದ ರೈಲ್ವೆ ಯೋಜನೆಗಳ ಅನುಷ್ಠಾನಕ್ಕೆ ರೈಲ್ವೆ ಖಾತೆ ರಾಜ್ಯ ಸಚಿವ ಮುನಿಯಪ್ಪ ವಿಶೇಷ ಪ್ರಯತ್ನ ಮಾಡಿಲ್ಲ. ಈ ಬಜೆಟ್ ಪಶ್ಚಿಮ ಬಂಗಾಳಕ್ಕಷ್ಟೇ ಲಾಭದಾಯಕ~ ಎಂಬುದು ಕೇಂದ್ರದ ರೈಲ್ವೆ ಖಾತೆಯ ಮಾಜಿ ರಾಜ್ಯ ಸಚಿವ ಬಸನಗೌಡ ಪಾಟೀಲ ಯತ್ನಾಳ ಆರೋಪ.

`ಸಚಿವ ಮುನಿಯಪ್ಪ ಅವರಿಂದಲೇ ಉತ್ತರ ಕರ್ನಾಟಕದ ಜನತೆಗೆ ಅನ್ಯಾಯವಾಗುತ್ತಿದೆ. ಮುಂಬೈ, ದಿಲ್ಲಿ, ವಾರಾಣಸಿಗಳಿಗೆ ವಿಜಾಪುರ ಮಾರ್ಗವಾಗಿ ರೈಲು ಓಡಿಸಬೇಕು, ಮೈಸೂರು-ಶಿರಡಿ ಗರೀಬ್ ರಥನ್ನು ಪುನರಾರಂಭಿಸಬೇಕು ಎಂಬ ಬೇಡಿಕೆಗೆ ಸ್ಪಂದಿಸಿಲ್ಲ. ಕಳೆದ ಬಜೆಟ್ನಲ್ಲಿ ಘೋಷಿಸಿದ್ದ ಮೈಸೂರು-ವಿಜಾಪುರ ವಿದ್ಯಾರ್ಥಿ ಎಕ್ಸಪ್ರೆಸ್ ರೈಲು ಇನ್ನೂ ಆರಂಭಗೊಂಡಿಲ್ಲ~ ಎಂದು ಬ್ರಾಡ್ಗೇಜ್ ಹೋರಾಟ ಸಮಿತಿ ಅಧ್ಯಕ್ಷ ವಿಶ್ವನಾಥ ಭಾವಿ ಆಕ್ರೋಶ ವ್ಯಕ್ತಪಡಿಸಿದರು.

`ಬಸವಾ ಎಕ್ಸ್ಪ್ರೆಸ್ ರೈಲು ಮಂತ್ರಾಲಯ ರೋಡ್ಗೆ ನಿಂತು ನೀರು ತುಂಬಿಕೊಳ್ಳುತ್ತದೆ. ಆದರೆ, ಆ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಇಳಿಯಲು ಅವಕಾಶ ಇಲ್ಲ. ಅಲ್ಲಿ ನಿಲುಗಡೆ ಕಲ್ಪಿಸಿ ಮಂತ್ರಾಲಯ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಿಕೊಡುವ ಸಣ್ಣ ಕೆಲಸವನ್ನೂ ಸಚಿವರು ಮಾಡಿಲ್ಲ~ ಎಂದು ಆರೋಪಿಸಿದರು.

`ಗದಗ-ಹೊಟಗಿ ವಾಯಾ ವಿಜಾಪುರ ಮಧ್ಯೆ ಡಬಲ್ ಲೈನ್ ಸಮೀಕ್ಷೆಗೆ ಆದೇಶಿಸಲಾಗಿದೆ. ಕೂಡಗಿಯಲ್ಲಿ ಬೃಹತ್ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಯಾಗುತ್ತಿರುವುದರಿಂದ ಅದಕ್ಕೆ ಕಲ್ಲಿದ್ದಲು ಪೂರೈಕೆಗೆ ಜೋಡಿ ಮಾರ್ಗ ಅಗತ್ಯವಿದೆ ಎಂಬ ಕಾರಣಕ್ಕೆ ಸಮೀಕ್ಷೆಗೆ ಆದೇಶಿಸಲಾಗಿದೆ. ಇದನ್ನು ಬಿಟ್ಟರೆ ಅವಳಿ ಜಿಲ್ಲೆಗೆ ಯಾವುದೇ ಕೊಡುಗೆ ಇಲ್ಲ~ ಎನ್ನುತ್ತಾರೆ ಯುವ ಉದ್ಯಮಿ ಸಂಗರಾಜ ದೇಸಾಯಿ.

`ಬಜೆಟ್ನಲ್ಲಿ ಉತ್ತರ ಕರ್ನಾಟಕಕ್ಕೆ ಯಾವುದೇ ಹೊಸ ರೈಲಿನ ಪ್ರಸ್ತಾಪವಿಲ್ಲ. ಆಲಮಟ್ಟಿ- ಯಾದಗಿರಿ, ಆಲಮಟ್ಟಿ- ಕೊಪ್ಪಳ ರೈಲು ಮಾರ್ಗದ ರಚನೆಯ ಪ್ರಸ್ತಾಪವೇ ಇಲ್ಲ. ಗದಗ- ವಿಜಾಪುರ ಮಧ್ಯೆ ಹೊಸ ಪ್ಯಾಸೆಂಜರ್ ರೈಲು, ವಿಜಾಪುರ- ಹೊಸಪೇಟ, ವಿಜಾಪುರ- ಮೈಸೂರ ಎಕ್ಸ್ಪ್ರೆಸ್ ರೈಲು ಘೋಷಣೆಯೂ ಆಗಿಲ್ಲ~ ಎಂದು ಬಿಜೆಪಿ ಮುಖಂಡ ಶಿವಾನಂದ ಕಲ್ಲೂರ ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.