ಝೀ ಕನ್ನಡ ವಾಹಿನಿಯಲ್ಲಿ `ಕುಣಿಯೋಣು ಬಾರಾ~ ಸರಣಿ ಮತ್ತೆ ಆರಂಭವಾಗಲಿದೆ. ಈ ಮೊದಲು ರಾಜ್ಯದಾದ್ಯಂತ ಇರುವ ಪ್ರತಿಭಾವಂತ ನೃತ್ಯಪಟುಗಳ ಸಾಮರ್ಥ್ಯವನ್ನು ಅನಾವರಣಗೊಳಿಸಿದ್ದ ವಾಹಿನಿ ಇದೀಗ ಕಿರುತೆರೆ ನಟಿಯರ ನರ್ತನ ಸಾಮರ್ಥ್ಯವನ್ನು ಒರೆಗೆ ಹಚ್ಚುವ ಕೆಲಸ ಮಾಡಲಿದೆ.

ಇದು `ಕುಣಿಯೋಣು ಬಾರಾ~ ರಿಯಾಟಿಷಿ ಶೋನ ಒಂಬತ್ತನೇ ಸರಣಿ. ಇದರಲ್ಲಿ ಕಿರುತೆರೆಯ ಎಂಟು ಜನ ಕಲಾವಿದೆಯರಾದ ಗೌತಮಿ, ಶ್ವೇತಾ ಚೆಂಗಪ್ಪ, ಗ್ರೀಷ್ಮಾ, ಇಳಾ ವಿಟ್ಲ, ಹಂಸ, ಮೋನಿಷಾ, ವೈಷ್ಣವಿ, ಅಂಕಿತಾ ಸ್ಪರ್ಧಿಸುತ್ತಿದ್ದಾರೆ. ಇವರಿಗೆ ಜೋಡಿಯಾಗಿ ನರ್ತಿಸುವ ಹುಡುಗರನ್ನು ಆಡಿಶನ್ ಮೂಲಕ ಆಯ್ಕೆ ಮಾಡಲಾಗಿದೆ. 34 ಕಂತುಗಳಲ್ಲಿ ಕಾರ್ಯಕ್ರಮ ಪ್ರಸಾರವಾಗಲಿದೆ.

ನಟಿ ನಿಧಿ ಸುಬ್ಬಯ್ಯ, ನೃತ್ಯ ನಿರ್ದೇಶಕ ಮಾಲೂರು ಶ್ರೀನಿವಾಸ್ ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ. ಕಲಾ ಮಾಸ್ಟರ್ ಕಾರ್ಯಕ್ರಮವನ್ನು ನಿರ್ದೇಶಿಸುತ್ತಿದ್ದಾರೆ. ಅ.13ರಿಂದ ಗುರುವಾರ ಮತ್ತು ಶುಕ್ರವಾರ ರಾತ್ರಿ 9ಕ್ಕೆ ಕಾರ್ಯಕ್ರಮ ಪ್ರಸಾರವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.