ಸೋಮವಾರ, ಜನವರಿ 20, 2020
20 °C
ಸೋಮವಾರ, 9–12–1963

ಮತ್ತೆ ತಟಸ್ಥ ರಾಷ್ಟ್ರಗಳ ಸಭೆಗೆ ನೆಹ್ರೂ ಒಪ್ಪಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೆಹಲಿ, ಡಿ. 8– ಬೆಲ್ಗ್ರೇಡ್‌ನಲ್ಲಿ ಸಮಾ ವೇಶಗೊಂಡಿದ್ದ ರೀತಿಯ ಇನ್ನೊಂದು ತಟಸ್ಥ ರಾಷ್ಟ್ರಗಳ ಸಮ್ಮೇಳನ ಸಮಾ ವೇಶಗೊಳ್ಳಬೇಕೆಂದು ಸಿಂಹಳ ಪ್ರಧಾನ ಮಂತ್ರಿ ಶ್ರೀಮತಿ ಸಿರಿಮಾವೋ ಬಂಡಾರ ನಾಯಕೆ ಮತ್ತು ಸಂಯುಕ್ತ ಅರಬ್‌ ಗಣ ರಾಜ್ಯದ ಅಧ್ಯಕ್ಷ ನಾಸೆರರ ಸಲಹೆ ಯನ್ನು ಅನುಮೋದಿಸಿ ಪ್ರಧಾನ ಮಂತ್ರಿ ದ್ವಯರಿಗೂ ಭಾರತದ ಪ್ರಧಾನಮಂತ್ರಿ ನೆಹರೂರವರು ಪತ್ರ ಬರೆದಿರುವುದಾಗಿ ತಿಳಿದುಬಂದಿದೆ.ಏರೋಡ್ರೋಂನಲ್ಲಿ 1000 ತೊಲ ಚಿನ್ನ ಪತ್ತೆ

ಬೆಂಗಳೂರು, ಡಿ. 8–
ಮುಂಬೈನಿಂದ ವಿಮಾನದಲ್ಲಿ ನಗರಕ್ಕೆ ಆಗಮಿಸಿದ ಶ್ರೀ ಎ.ಎಸ್‌. ಕೆ. ಚೌಧರಿ ಎಂಬ ಪ್ರಯಾಣಿಕ ನಿಂದ ಕೇಂದ್ರ ಎಕ್ಸೈಸ್‌ ಅಧಿಕಾರಿಗಳು ಸುಮಾರು 125000 ರೂಪಾಯಿ ಬೆಲೆ ಬಾಳುವ 1000 ತೊಲ ಚಿನ್ನವನ್ನು ವಿಮಾನ ನಿಲ್ದಾಣದಲ್ಲಿ ವಶಪಡಿಸಿ ಕೊಂಡರು. ಪ್ರಯಾಣಿಕ ಧರಿಸಿದ್ದ ಬಿಳಿ ಡಿಲ್‌ ಜಾಕೆಟ್‌ನಲ್ಲಿ ಚಿನ್ನವನ್ನು ಬಚ್ಚಿಡಲಾಗಿತ್ತು. ತನಿಖೆ ನಡೆಯುತ್ತಿದೆ.

ಪ್ರತಿಕ್ರಿಯಿಸಿ (+)