ಶುಕ್ರವಾರ, ಮಾರ್ಚ್ 5, 2021
27 °C

ಮತ್ತೆ ಬಣ್ಣ ಹಚ್ಚುವ ಹಾದಿಯಲ್ಲಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮತ್ತೆ ಬಣ್ಣ ಹಚ್ಚುವ ಹಾದಿಯಲ್ಲಿ...

ಸುಷ್ಮಿತಾ ಸೇನ್ ಕಳೆದೆರಡು ವರ್ಷಗಳಿಂದ ಬೆಳ್ಳಿ ತೆರೆಯಿಂದ ದೂರ ಸರಿದಿದ್ದಾರೆ. ಸೌಂದರ್ಯ ಸ್ಪರ್ಧೆಗೆ ಯುವತಿಯರನ್ನು ಸಿದ್ಧಪಡಿಸುವ ತಮ್ಮ ಸಂಸ್ಥೆ `ಐ ಆ್ಯಮ್ ಶಿ~ಗೆ ಈಗ ಎರಡು ವರ್ಷ ತುಂಬಿದೆ.`ಈ ಸಂಸ್ಥೆಯ ಹುಡುಗಿ ಹಿಮಾಂಗಿನಿ ಸಿಂಗ್ ಯಾದು ಮಿಸ್ ಏಷ್ಯಾ ಪೆಸಿಫಿಕ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಹೀಗಾಗಿ ಈಗ ನಿರಾತಂಕಳಾಗಿದ್ದೇನೆ. ಇನ್ನು ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳಬಲ್ಲೆ~ ಎಂದೆಲ್ಲ ಸುಷ್ಮಿತಾ ಸೇನ್ ಹೇಳಿಕೊಂಡಿದ್ದಾರೆ.`ನೋ ಪ್ರಾಬ್ಲಂ~ ಚಿತ್ರದ ನಂತರ ಸುಷ್ಮಿತಾ ಯಾವುದೇ ಚಿತ್ರಗಳನ್ನು ಒಪ್ಪಿಕೊಂಡಿರಲಿಲ್ಲ. ತಮ್ಮ ಸಂಸ್ಥೆಯನ್ನು ಕಟ್ಟುವಲ್ಲಿ ನಿರತರಾಗಿದ್ದರು. ಈ ನಡುವೆ ಇನ್ನೊಂದು ಹೆಣ್ಣು ಮಗುವನ್ನೂ ದತ್ತು ಪಡೆದಿದ್ದರು.`ನನ್ನ ಮೊದಲ ಮಗಳು ರೆನೆಗೆ ಈಗ 13ರ ಹರೆಯ. ಎರಡನೆಯ ಮಗಳು ಆಸೀಹಾಗೆ ಮೂರು ತುಂಬಿತು. ಈಗ ಈ ಎರಡು ವರ್ಷಗಳ ಬ್ರೇಕ್ ಸಾಕು. ಒಂದಷ್ಟು ಪ್ರಾಜೆಕ್ಟ್‌ಗಳು ಕೈಯಲ್ಲಿವೆ. ಎಲ್ಲವೂ ಅಂದುಕೊಂಡಂತೆ ನಡೆದರೆ ವರ್ಷದ ಕೊನೆಯಲ್ಲಿ ಅಥವಾ 2013ರ ಆರಂಭದಲ್ಲಿ ನಾನು ತೆರೆಯ ಮೇಲೆ ಕಾಣಿಸಿಕೊಳ್ಳುವೆ~ ಎಂದು ಹೇಳಿದ್ದಾರೆ.2007ರಲ್ಲಿ `ಝಾನ್ಸಿ ಕಿ ರಾಣಿ~ ಚಿತ್ರ ನಿರ್ಮಾಣ ಮತ್ತು ನಿರ್ದೇಶನದ ಬಗ್ಗೆ ಸುಷ್ಮಿತಾ ಘೋಷಿಸಿದ್ದರು. ಈಗ ಈ ಚಿತ್ರಕ್ಕೆ ಅಗತ್ಯವಿರುವಷ್ಟು ಬಜೆಟ್ ಸೇರಿದೊಡನೆ, ಕೆಲಸವನ್ನು ಆರಂಭಿಸುವೆ~ ಎಂದೂ ಹೇಳಿಕೊಂಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.