ಗುರುವಾರ , ಜೂನ್ 24, 2021
23 °C

ಮತ್ತೆ ಶಂಕರ್-ಎಹ್ಸಾನ್-ಲಾಯ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಂಕರ್ ಮಹದೇನ್ ಅವರ ಗಾಯನ, ಎಹ್ಸಾನ್ ನೂರಾನಿಯ ಗಿಟಾರ್ ಹಾಗೂ ಲಾಯ್ ಮೆನ್‌ಡೋನ್ಸಾ ಅವರ ಕೀಬೋರ್ಡ್ ಕೇಳುವುದೇ ಒಂದು ಅನನ್ಯ ಅನುಭವ. ಈ ಮೂವರು ಸಂಗೀತದ ಅದ್ಭುತ ಪ್ರತಿಭೆಗಳು.ಇವರನ್ನು ಸಂಗೀತ ಕ್ಷೇತ್ರದ ತ್ರಿಮೂರ್ತಿಗಳು ಎಂದು ಕೂಡ ಕರೆಯುತ್ತಾರೆ. ಕಳೆದ 15 ವರ್ಷದಿಂದ ಸಂಗೀತ ಕ್ಷೇತ್ರದಲ್ಲಿರುವ ಇವರು ತಮ್ಮದೇ ಛಾಪು ಮೂಡಿಸಿದ್ದಾರೆ ಹಾಗೂ ತಮ್ಮದೇ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ.ಈ ಮೂವರೂ ಪ್ರತಿಭೆಗಳು ಇದೇ ಮೊದಲ ಬಾರಿಗೆ ಸಂಗೀತ ಕಾರ್ಯಕ್ರಮ ನೀಡುವ ಸಲುವಾಗಿ ಬೆಂಗಳೂರಿಗೆ ಬರುತ್ತಿದ್ದಾರೆ. ಕಾರ್ಯಕ್ರಮದ ಹೆಸರು `ಶಂಕರ್-ಎಹ್ಸಾನ್-ಲಾಯ್ ಲೈವ್ ಕಾನ್ಸರ್ಟ್~. ಇದನ್ನು ಸೀಗ್ರಾಮ್ಸ 100 ಪೈಪರ್ಸ್‌ ಆಯೋಜಿಸಿದೆ.ಶಂಕರ್ ಮಹದೇವನ್ ಕಂಠಕ್ಕೆ ಇರುವ ಲಾಲಿತ್ಯ, ಈಶಾನ್ ಬೆರಳುಗಳಲ್ಲಿ ಮಿಡಿವ ಗಿಟಾರ್ ಹಾಗೂ ಲಾಯ್ ಮೆಂಡೊನ್ಸಾ ಅವರ ಕೀಬೋರ್ಡ್‌ನಿಂದ ಹೊಮ್ಮುವ ನಿನಾದಕ್ಕೆ ತಲೆದೂಗಲು ಬೆಂಗಳೂರು ಸಜ್ಜುಗೊಳ್ಳಬೇಕಷ್ಟೆ. ಈ ಮೂರು ಪ್ರತಿಭೆಗಳು ಒಂದೆಡೆ ಸಂಗಮಿಸಿದರೆ ಅಲ್ಲಿ ಸಂಗೀತದ ಜುಳುಜುಳನೆ ಹರಿಯುತ್ತದೆ. ಒಮ್ಮಮ್ಮೆ ಭೋರ್ಗರೆಯುತ್ತದೆ. ಶಂಕರ್ ಗಾಯನ, ಈಶಾನ್‌ನ ಗಿಟಾರ್ ಹಾಗೂ ಲಾಯ್ ಮೆನ್‌ಡೋನ್ಸಾ ಕೀಬೋರ್ಡ್‌ನ ಸೊಬಗು ಸವಿಯುವ ಇಚ್ಛೆ ಇದ್ದವರು ಭಾನುವಾರ ಅರಮನೆ ಮೈದಾನದಲ್ಲಿರುವ ತ್ರಿಪುರ ವಾಸಿನಿಯಲ್ಲಿ ಸಂಜೆ 7ಕ್ಕೆ ನಡೆಯುವ ಲೈವ್ ಕಾನ್ಸರ್ಟ್‌ನಲ್ಲಿ ಪಾಲ್ಗೊಳ್ಳಬಹುದು.ಟಿಕೆಟ್‌ಗಳು ಕುಪ್ಪಾ ಔಟ್‌ಲೆಟ್ಸ್, ಜಯನಗರ 4ನೇ ಟಿ ಬ್ಲಾಕ್, ಜ್ಯೋತಿ ನಿವಾಸ ಕಾಲೇಜು ಹತ್ತಿರ  ಹಾಗೂ ಎಂಜಿ ರಸ್ತೆ ಯಲ್ಲಿರುವ ಶಂಕರ್‌ನಾಗ್ ಫೇಮ್‌ನಲ್ಲಿ ಸಿಗಲಿವೆ. ಆನ್‌ಲೈನ್ ಟಿಕೆಟ್ ಬುಕಿಂಗ್‌ಗಾಗಿ Bookmyshow.com  ನೋಡಿ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.