ಗುರುವಾರ , ಮಾರ್ಚ್ 23, 2023
31 °C

ಮದ್ದುಗುಂಡು ಸಹಿತ ಪ್ರಯಾಣ ಅಮೆರಿಕ ವ್ಯಕ್ತಿಯ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಿಯಾಮಿ (ಎಪಿ): ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ವಿಮಾನವೊಂದರಿಂದ ಕೆಳಗಿಳಿಸುತ್ತಿದ್ದ ಬ್ಯಾಗ್‌ವೊಂದರಲ್ಲಿ ಮದ್ದುಗುಂಡುಗಳು ಪತ್ತೆಯಾದ ಹಿನ್ನೆಲೆಯಲ್ಲಿ ಎಫ್‌ಬಿಐ 37 ವರ್ಷದ ವ್ಯಕ್ತಿಯೊಬ್ಬನನ್ನು ಬಂಧಿಸಿ, ಮೊಕದ್ದಮೆ ದಾಖಲಿಸಿದೆ.



ಬ್ಯಾಗ್‌ನಲ್ಲಿ ಹಲವು ಮದ್ದುಗುಂಡುಗಳಿದ್ದು, ಇದರಲ್ಲಿ ಬೆಂಕಿಯ ಕಿಡಿ ಕಾಣಿಸಿಕೊಂಡ ನಂತರ ಆರೋಪಿಯನ್ನು ಬಂಧಿಸಲಾಗಿದೆ. ಈ ಸಂದರ್ಭದಲ್ಲಿ ಬ್ಯಾಗ್ ಹೊಂದಿದ್ದ ವ್ಯಕ್ತಿಯ ಪಾದರಕ್ಷೆಗಳಿಗೆ ಬೆಂಕಿಯ ಕಿಡಿ ತಗುಲಿದ್ದು ಬೇರಾರಿಗೂ ಗಾಯಗಳಾಗಿಲ್ಲ ಎಂದು ಎಫ್‌ಬಿಐ ವಕ್ತಾರ ಮೈಕ್ ಲಿವರ್‌ರಾಕ್ ತಿಳಿಸಿದ್ದಾರೆ.



ಆರೋಪಿಯು ಅಮೆರಿಕ ನಾಗರಿಕನಾಗಿದ್ದು, ಈತ ಮಂಗಳವಾರ ಬಾಸ್ಟನ್‌ನಿಂದ ಮಿಯಾಮಿ ಮತ್ತು ಜಮೈಕಾಗೆ ಹೊರಟಿದ್ದ ವಿಮಾನದಲ್ಲಿ ಬಂದಿಳಿದಿದ್ದು,  ಈತನ ಹೆಸರನ್ನು ಬಹಿರಂಗಪಡಿಸಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.