ಮಂಗಳವಾರ, ಮೇ 18, 2021
24 °C

ಮದ್ಯದಂಗಡಿಗೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಹಟ್ಟಿ: ಗ್ರಾಮದಲ್ಲಿ ಹೊಸದಾಗಿ ಪ್ರಾರಂಭವಾಗುತ್ತಿರುವ ಮದ್ಯದ ಅಂಗಡಿಯನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ತಾಲ್ಲೂಕಿನ ಬೆಳ್ಳಟ್ಟಿ ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿ ಗ್ರಾಮ ಲೆಕ್ಕಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಈಗಾಗಲೇ ಗ್ರಾಮದಲ್ಲಿರುವ ಮದ್ಯದ ಅಂಗಡಿಯಿಂದ ಕುಡುಕರ ಹಾವಳಿ ವಿಪರೀತವಾಗಿದ್ದು, ಗ್ರಾಮದಲ್ಲಿ ಅಶಾಂತಿ ನಿರ್ಮಾಣವಾಗಿದೆ. ಈ ಕುರಿತು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕೆಂದು ಚಿಂತನೆ ನಡೆಸಿರುವ ಈ ಸಂದರ್ಭದಲ್ಲಿ, ಈದೀಗ ಮತ್ತೊಂದು ಅಂಗಡಿ ಪ್ರಾರಂಭವಾಗುತ್ತಿರುವುದು ಕಲುಷಿತ ವಾತಾವರಣಕ್ಕೆ ಮತ್ತಷ್ಟು ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ದೂರಿದರು.ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯಿತಿ ಸದಸ್ಯರು ಮತ್ತು ಗ್ರಾಮ ಪಂಚಾಯಿತಿ ಈ ಕುರಿತು ಗ್ರಾಮದಲ್ಲಿ ಪ್ರಾರಂಭವಾಗುವ ನೂತನ ಮದ್ಯದಂಗಡಿಗೆ ಪರವಾನಗಿ ನೀಡಬಾರದೆಂದು ಮನವಿ ಸಲ್ಲಿಸಿದ್ದಾರೆ. ಆದರೂ ಪಟ್ಟಭದ್ರ ಹಿತಾಸಕ್ತಿಗಳ ಕಾರಣದಿಂದಾಗಿ ಅಂಗಡಿ ತೆರೆಯಲು ಪ್ರಾರಂಭಿಸಿರುವುದು ಖಂಡನೀಯ ಎಂದು ಗ್ರಾಮಸ್ಥರು ಹೇಳಿದ್ದಾರೆ.ಮೇಲಾಧಿಕಾರಿಗಳು ಈ ಎಲ್ಲ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರಾಜೇಸಾಬ ಕೋಟಿಹಾಳ, ನಾಗಪ್ಪ ಕೊಣ್ಣೊರ, ಮಕ್ತೂಮ ರಾಹುತ, ಚಂದ್ರು ಈಟಿ, ಫಕೀರೇಶ ತಳವಾರ, ಪ್ರಭುಗೌಡ ಹಿರೇಗೌಡರ, ಫಕೀರೇಶ ಈಳಿಗೇರ, ರಾಜೇಸಾಬ ತಾಡಪತ್ರಿ, ಮಾಬುಸಾಬ ಎಲಿಗಾರ, ತಿರಕನಗೌಡ ಪಾಟೀಲ, ಮಲ್ಲಪ್ಪ ಹರಿಜನ, ದಾವಲಸಾಬ ಕೋಟಿಹಾಳ, ಮಂಜುನಾಥ ಕುಸಗೂರ, ವೆಂಕಪ್ಪ ಶಿರಹಟ್ಟಿ, ನೀಲವ್ವ ತಿಪ್ಪಾಪೂರ, ಯಲ್ಲವ್ವ ಕಟ್ಟಿಮನಿ, ರೆಹಮಾನಬಿ ಕೋಟಿಹಾಳ, ಬಸವ್ವ ದೊಡ್ಡಮನಿ, ಹನುಮವ್ವ ಹಾವೇರಿ ಮತ್ತಿತರರು ಮನವಿಯಲ್ಲಿ ತಿಳಿಸಿದ್ದಾರೆ.           

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.