ಗುಬ್ಬಿ: ಪಟ್ಟಣದ ಗೋಸಲ ಚನ್ನಬಸವೇಶ್ವರಸ್ವಾಮಿ, ಮಲ್ಲಿಕಾರ್ಜುನಸ್ವಾಮಿ ಹಾಗೂ ಪಾರ್ವತಮ್ಮನವರ ಹೂವಿನ ವಾಹನ ಮಹೋತ್ಸವ ಸೋಮವಾರ ರಾತ್ರಿ ವಿಜೃಂಭಣೆಯಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಜರುಗಿತು.

ಕಾರ್ತೀಕ ಅಮಾವಾಸ್ಯೆಯ ಪ್ರಯುಕ್ತ ಪ್ರತಿವರ್ಷದಂತೆ ಎರಡು ರಥಗಳನ್ನು ಸಂಪೂರ್ಣ ಪುಷ್ಪಾಲಂಕರಗೊಳಿಸಿ ರಾತ್ರಿ 11ರ ನಂತರ ರಥ ಎಳೆಯಲಾಯಿತು. ವಿದ್ಯುತ್ ದೀಪಾಲಂಕರದಿಂದ ಕಂಗೊಳಿಸುತ್ತಿದ್ದ ರಥಗಳು ಚಲಿಸಿದಂತೆ ಭಕ್ತರು ಬಾಳೆಯ ಅಂಬು ಹಾಯುವ ಮೂಲಕ ಪೂಜೆ, ಹರಕೆ ಸಲ್ಲಿಸಿದರು.

ಭಕ್ತರು ತಮ್ಮ ಮನೆ ಹಾಗೂ ಅಂಗಡಿಗಳ ಮುಂದೆ ಬಾಳೆಗಿಡವನ್ನು ಅಲಂಕರಿಸಿ ರಥದ ಆಗಮನಕ್ಕೆ ಕಾಯುತ್ತಿದ್ದರು. ಮನೆಗಳ ಮುಂದೆ ಮಾಡಿದ್ದ ಹೂವಿನ ಅಲಂಕಾರ, ರಂಗೋಲಿ ಚಿತ್ತಾರವು ನೋಡುಗರನ್ನು ಆಕರ್ಷಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.