ಭಾನುವಾರ, ಮೇ 22, 2022
28 °C

ಮನೆಯಂಗಳದಲ್ಲಿ ಲಕ್ಷ್ಮೀನಾರಾಯಣಭಟ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನ್ನಡ ಮತ್ತು ಸಂಸ್ಕೃತಿ ಇಲಾಖೆ: ಶನಿವಾರ ಮನೆಯಂಗಳದಲ್ಲಿ ಮಾತುಕತೆಯಲ್ಲಿ ಸಾಹಿತಿ ಡಾ.ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರೊಂದಿಗೆ ಸಂವಾದ.1936ರಲ್ಲಿ ಶಿವಮೊಗ್ಗದಲ್ಲಿ ಜನಿಸಿದ ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಭಾವಗೀತೆಗಳಿಗೆ ವಿಶಿಷ್ಟ ಆಯಾಮ ನೀಡಿದ ಕವಿ.  ಏಳು ಕವನ ಸಂಕಲನ, ಐದು ಭಾವಗೀತೆ ಸಂಕಲನ, ಐದು ವಿಮರ್ಶಾ ಕೃತಿಗಳು ಹಾಗೂ ನಾಲ್ಕು ನಾಟಕಗಳನ್ನು ರಚಿಸಿದ್ದಾರೆ. ವೃತ್ತ, ಸುಳಿ, ಚಿತ್ರಕೂಟ ಇವರ ಪ್ರಮುಖ ಕವನ ಸಂಕಲನಗಳು.ಮಕ್ಕಳಿಗಾಗಿ ಅನೇಕ ಕವನ ಸಂಕಲನಗಳು, ಧ್ವನಿಸುರುಳಿಗಳನ್ನು ಹೊರತಂದಿರುವ ಭಟ್ಟರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಮೂರು ಬಾರಿ ಪ್ರಶಸ್ತಿಗಳು ಸಂದಿವೆ. ಸಾಹಿತ್ಯ ಸೇವೆಗಾಗಿ 1999ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಸ್ಥಳ: ಕನ್ನಡ ಭವನ, ಜೆ.ಸಿ.ರಸ್ತೆ. ಸಂಜೆ 4.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.