ಗುರುವಾರ , ಏಪ್ರಿಲ್ 22, 2021
29 °C

ಮನೆಯಂಗಳದಲ್ಲಿ ಹೂ ಹಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮನೆಯಂಗಳದಲ್ಲಿ ಹೂ ಹಸೆ

ಉಪಾಸನಾ ಸಂಸ್ಥೆಯ ತಿಂಗಳ ಕಾರ್ಯಕ್ರಮವಾದ `ಅಂಗಳದಲ್ಲಿ ಹೂ ಹಸೆ~ ರಮೇಶ ಅವರ ಮನೆಯಂಗಳದಲ್ಲಿ ನಡೆಯಿತು. ಉಪಾಸನಾ ಮೋಹನ್ ಸಂಗೀತ ಶಾಲೆಯಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುವುದು ಈ ಕಾರ್ಯಕ್ರಮದ ಉದ್ದೇಶ.ಮೊದಲ ಸರಣಿಯಲ್ಲಿ ಬಿ.ಎನ್. ಶಿಲ್ಪಕಲಾ, ವರ್ಷಾ ಸುರೇಶ್, ವಿಶ್ವಾಸ್ ವಸಿಷ್ಠ, ಸ್ವಾತಿ ರಾವ್, ಅಮೂಲ್ಯ ಶಾಸ್ತ್ರಿ, ಶ್ಲಾಘ್ಯ ವಸಿಷ್ಠ, ವೈಷ್ಣವಿ ಶ್ರೀವತ್ಸ ಹಾಗೂ ದೀಪ್ತಿ ರಮೇಶ ಭಾವಗೀತೆಗಳನ್ನು ಹಾಡಿ ರಂಜಿಸಿದರು.ಉಪಾಸನಾ ಮೋಹನ್ ಅವರ ಸಂಗೀತ ನಿರ್ದೇಶನದಲ್ಲಿ `ನಿನ್ನೊಳಗೆ ನೀನಿರು ಮನವೆ~, `ಬಯಲಿನೊಳಗೆ ಯಾರೋ ಮರೆತ~, ಹದಿನಾರರ ವಯಸೇ~, `ಒಂದು ಹೊಳೆ ನೂರು ತೆರೆ~ ಮುಂತಾದ ಹಲವು ಸಾಹಿತಿಗಳ ಗೀತರಚನೆಗಳನ್ನು ಹಾಡಿದರು.ಗಾಯಕರಾದ ಉಪಾಸನಾ ಮೋಹನ್, ಪಂಚಮ್ ಹಳಿಬಂಡಿ ಭಾವಗೀತೆಗಳನ್ನು ಹಾಡಿದರು. ಕಾರ್ಯಕ್ರಮವನ್ನು ಸಾಹಿತಿ ಎಚ್.ಎಸ್. ವೆಂಕಟೇಶಮೂರ್ತಿ ಉದ್ಘಾಟಿಸಿದರು. ಕವಯಿತ್ರಿ ರಂಜನಿ ಪ್ರಭು, ನಟ ಶ್ರಿನಿವಾಸಪ್ರಭು ಮತ್ತಿತರರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.