ಮಂಗಳವಾರ, ಮಾರ್ಚ್ 9, 2021
31 °C

ಮಮತಾ ಭೇಟಿಗೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಮತಾ ಭೇಟಿಗೆ ವಿರೋಧ

ಢಾಕಾ (ಪಿಟಿಐ):  ಇಸ್ಲಾಮಿಕ್‌ ಉಗ್ರ­ವಾದಿ­­ಗಳ ಬಗ್ಗೆ ಮೆದು ಧೋರಣೆ ಹೊಂದಿರುವ ಪಶ್ಚಿಮ ಬಂಗಾ­ಲದ ಮುಖ್ಯ­ಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ತಮ್ಮ ಬಾಂಗ್ಲಾ ಪ್ರವಾಸದ ನಿಯೋಗದಲ್ಲಿ ಕರೆತರ­ಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಲ್ಲಿನ ಹಿಂದೂ ಸಂಘಟನೆಗಳು ಆಗ್ರಹಿಸಿವೆ.ಬುಧವಾರ  ಇಲ್ಲಿ ಪತ್ರಿಕಾಗೋಷ್ಠಿ ನಡೆ­ಸಿದ ‘ವೇದಾಂತ ಸಾಂಸ್ಕೃತಿ ಮಂಚೊ’ ಪ್ರಧಾನ ಕಾರ್ಯದರ್ಶಿ ಬಿನಯ್‌ ಭೂಷಣ್‌ ಜಾಯ್‌ಭರ್‌, ‘ಇಸ್ಲಾಮಿಕ್‌ ಉಗ್ರಗಾಮಿಗಳು ಪಶ್ಚಿಮ ಬಂಗಾಲದ ಮುಖ್ಯಮಂತ್ರಿಗಳ ಮೆದು ಧೋರಣೆಯಿಂದಾಗಿ ಬಾಂಗ್ಲಾದೇಶ ಮತ್ತು ಭಾರತ ವಿರೋಧಿ ಚಟುವಟಿಕೆ­ಗಳನ್ನು ನಡೆಸುತ್ತಿರಬೇಕು. ಎರಡೂ ದೇಶ­ಗಳ ಶಾಂತಿಪ್ರಿಯ ಜನರು ಈ ಬಗ್ಗೆ ಮಾತನಾಡುತ್ತಿದ್ದರೂ ಮೌನ ವಹಿಸಿ­ರುವ ಮಮತಾ ಬಾಯಿ­ಬಿಡಬೇಕು. ಒಂದು ವೇಳೆ ಅವರು ಬಾಂಗ್ಲಾದೇಶಕ್ಕೆ ಬಂದರೆ ಅವರನ್ನು ಹಿಂದಕ್ಕೆ ಕಳುಹಿಸು­ವ­ವರೆಗೆ ಪ್ರತಿಭಟನೆ ನಡೆಸಬೇಕು’ ಎಂದು ಎಲ್ಲಾ ವಿಮೋಚನಾ ಪರ ಸಂಘಟನೆಗಳನ್ನೂ  ಒತ್ತಾಯಿಸಿದರು.ಈ ವಾರದಲ್ಲಿ ಎರಡು ದಿನಗಳ ಬಾಂಗ್ಲಾ ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ ಮೋದಿ ಅವರ ತಂಡದಲ್ಲಿ ಮಮತಾ ಬ್ಯಾನರ್ಜಿ ಕೂಡಾ ಸೇರಿದ್ದಾರೆ ಎನ್ನಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.