ದಾವಣಗೆರೆ: ದೊಡ್ಡ ರೈತರಿಗೆ ಕೂಲಿ ಕಾರ್ಮಿಕರ ಕೊರತೆ ಮತ್ತು ಕೀಟ ಹಾವಳಿ ನಮ್ಮ ಜೀವ ಹಿಂಡುತ್ತವೆ... ನಾಟಿ ಮಾಡಿದ ಮೇಲೆ ಸುಳಿರೋಗ ತಪ್ಪದೇ ಕಾಡುತ್ತದೆ... ಇದರ ಮಧ್ಯೆ ಇಳುವರಿ ಕುಸಿತ ಭತ್ತ ಬೆಳೆಗಾರರು ಅಧೀರರನ್ನಾಗಿಸುತ್ತದೆ... ಇಂಥ ಸಮಸ್ಯೆಗಳಿಂದ ಮುಕ್ತಿ ಪಡೆಯಲು ನಮಗೆ ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ಬಗೆಯ ಕೀಟನಾಶಕಗಳೇ ಆಧಾರ... ಕೀಟನಾಶಕ ಸಿಂಪಡಣೆ ಮಾಡಲು ಕೂಲಿ ಕಾರ್ಮಿಕರು ಸಿಗುವುದಿಲ್ಲ... ಸಿಕ್ಕರೂ ಸಿಂಪಡಣೆಯ ಸಂದರ್ಭದಲ್ಲಿ ಅವರು ಬದುಕುಳಿಯುತ್ತಾರೆ ಎಂಬ ಭರವಸೆ ಇಲ್ಲ...

ಜೀವಭಯದಲ್ಲಿ ನಾವು ಬದುಕುವಂತಾಗಿದೆ... ಈಗ ‘ಡೂಪಾಂಟ್ ಫರ್ಟೆರ್ರಾ’ ಬಳಕೆಯಿಂದಾಗಿ ನೆಮ್ಮದಿ ಕಂಡಿದ್ದೇನೆ...
–ಮರಡಿ ಗ್ರಾಮದ ಸಮೀಪದ ಜಮೀನಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಭತ್ತ ಬೆಳೆ ಕ್ಷೇತ್ರೋತ್ಸವದಲ್ಲಿ ರೈತ ರುದ್ರೇಶ್ ತಮ್ಮ ಅನುಭವ ಹಂಚಿಕೆ ಕೊಂಡಿದ್ದು ಹೀಗೆ.

ಡೂಪಾಂಟ್ ಫರ್ಟೆರ್ರಾ ಬಳಕೆಯಿಂದಾಗಿ ಒಂದು ಎಕರೆಗೆ 32 ಚೀಲ ಇಳುವರಿ ಬಂದಿದೆ.ಇದಲ್ಲದೇ ಭತ್ತ ಕಟಾವು ಅವಧಿ ಮುಗಿದರೂ ಭತ್ತ ನೆಲಕ್ಕೆ ಬಿದ್ದಿಲ್ಲ. ಕಟಾವು ಯಂತ್ರದ ಕೊರತೆಯಿಂದಾಗಿ 20 ದಿನ ಹೆಚ್ಚುವರಿ ಕಾಲ ಜಮೀನಿನಲ್ಲೇ ಬಿಟ್ಟಿದ್ದೇವೆ. ಆದರೂ, ಭತ್ತ ಏನೂ ಆಗಿಲ್ಲ. ಗುಣಮಟ್ಟ ಕೂಡ ಕುಸಿದಿಲ್ಲ ಎಂದು ಅವರು ವಿವರಿಸಿದರು.ರೈತರಾದ ಲೋಹಿತ್ ಅನುಭವ ಹಂಚಿಕೊಂಡರು.

ಡೂಪಾಂಟ್ ಇಂಡಿಯಾ ಕಂಪೆನಿಯ ಪ್ರಾದೇಶಿಕ ಮಾರುಕಟ್ಟೆ ವ್ಯವಸ್ಥಾಪಕ ಜೆ.ಚಂದ್ರು ಸಿಂಗ್, ರಾಧೆ ಶ್ಯಾಮ್ ತಿವಾರಿ, ಸುರೇಶ್ ಕುಮಾರ್, ರೈತರಾದ ರಾಜಪ್ಪ, ರವಿ ಕಾರಿಗನೂರು, ಪ್ರಸನ್ನ ಮರಡಿ, ಎಂ.ವಿ. ನಾಗರಾಜಪ್ಪ, ಬಿ.ಎಲ್. ಜಗದೀಶ್ ಕಾರಿಗನೂರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.