ಮರಳು ಗಣಿಗಾರಿಕೆ ನಿಷೇಧಕ್ಕೆ ಒತ್ತಾಯ

7

ಮರಳು ಗಣಿಗಾರಿಕೆ ನಿಷೇಧಕ್ಕೆ ಒತ್ತಾಯ

Published:
Updated:
ಮರಳು ಗಣಿಗಾರಿಕೆ ನಿಷೇಧಕ್ಕೆ ಒತ್ತಾಯ

ಗೌರಿಬಿದನೂರು: ತಾಲ್ಲೂಕಿನಲ್ಲಿ ಮರಳು ಸಾಗಣಿಕೆ ಹಾಗೂ ಗಣಿಗಾರಿಕೆ ನಿಷೇಧಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಂಘಟನೆಯ ಸದಸ್ಯರು ಗುರುವಾರ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.ರೈತ ಸಂಘದ ಅಧ್ಯಕ್ಷ ಎಂ.ಆರ್.ಲಕ್ಷ್ಮೀನಾರಾಯಣ ಮಾತನಾಡಿ, `ತಾಲ್ಲೂಕಿನಲ್ಲಿ ಅಕ್ರಮವಾಗಿ ಮರಳು ಸಾಗಣಿಕೆ ಮಾಡಲಾಗುತ್ತಿದೆ. ಮರಳು ಸಾಗಣಿಕೆ ಮತ್ತು ಗಣಿಗಾರಿಕೆ ನಿಯಂತ್ರಿಸುವಲ್ಲಿ ತಾಲ್ಲೂಕು ಮತ್ತು ಜಿಲ್ಲಾಡಳಿತ ವಿಫಲವಾಗಿವೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳ ಲಾಗುತ್ತಿಲ್ಲ~ ಎಂದು ಆರೋಪಿಸಿದರು.ರೈತ ಸಂಘದ ಕಾರ್ಯದರ್ಶಿ ಲೋಕೇಶಗೌಡ ಮಾತನಾಡಿ,`ಸರ್ಕಾರ ನಿರ್ಲಕ್ಷ್ಯ ತೋರುವುದನ್ನು ಮುಂದುವರೆಸಿದ್ದಲ್ಲಿ, ಅಕ್ರಮವಾಗಿ ಮರಳು ಸಾಗಣಿಕೆ ಮಾಡುತ್ತಿರುವ ವಾಹನಗಳನ್ನು ರೈತ ಸಂಘದ ಸದಸ್ಯರೇ ತಡೆದು ಸರ್ಕಾರಕ್ಕೆ ಒಪ್ಪಿಸಲಿದ್ದಾರೆ~ ಎಂದು ಎಚ್ಚರಿಕೆ ನೀಡಿದರು.ರೈತ ಸಂಘದ ಮುಖಂಡ ರಾದ ಲಕ್ಷ್ಮಿನಾರಾಯಣ, ಶಾಂತ ರಾಜ್, ಗಂಗರಾಜು, ಶೇಂದಿ ಅಶ್ವತ್ಥಪ್ಪ, ಆನಂದ, ಲಕ್ಷ್ಮಿಪತಿ, ಮುದ್ದರಂಗಯ್ಯ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry