ಕೊಳ್ಳೇಗಾಲ: ನದಿ ಪಾತ್ರದಿಂದ ಎತ್ತಿನಗಾಡಿಗಳಲ್ಲಿ ಮರಳು ಸಾಗಿಸಲು ಅನುಮತಿ ನೀಡಬೇಕು ಎಂದು ಎತ್ತಿನಗಾಡಿ ಮರಳು ಸಾಗಣೆದಾರರ ಸಂಘದ ಸದಸ್ಯರು ಶುಕ್ರವಾರ ಆಗ್ರಹಿಸಿದರು.

ಪಟ್ಟಣದಲ್ಲಿ ಎತ್ತಿನಗಾಡಿಗಳಲ್ಲಿ ಮರಳು ಸಾಗಣೆ ರದ್ದುಪಡಿಸಿರು ವುದನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನಾರಕಾರರು ತಹಶೀಲ್ದಾರ್ಗೆ ಮನವಿ ಸಲ್ಲಿಸಿದರು.

ಮುಖಂಡ ಅಣಗಳ್ಳಿ ಬಸವರಾಜು ಮಾತನಾಡಿ ಮರಳು ಸಾಗಣೆಯೇ ಕೂಲಿಕಾರ್ಮಿಕರ ಜೀವನೋಪಾಯ ವಾಗಿದೆ. ಇದನ್ನು ನಂಬಿ ಸಾಗಣೆದಾರರು ಚಕ್ಕಡಿ ಮತ್ತು ಎತ್ತುಗಳನ್ನು ಖರೀದಿಸಿದ್ದಾರೆ. ಈಗ ಎತ್ತಿನಗಾಡಿಗಳಲ್ಲಿ ಮರಳು ಸಾಗಣೆಗೆ ನಿರ್ಬಂಧ ಹೇರಿರುವುದರಿಂದ ಮರಳು ಸಾಗಣೆದಾರರು ತೀವ್ರ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದರು.

ಮುಖಂಡ ಪುಟ್ಟರಾಜೇ ಅರಸ್, ಕುಣಗಳ್ಳಿ ರಂಗಸ್ವಾಮಿ, ಸಂಜೀವಯ್ಯ, ಪಿ.ಮಾದೇವ, ರಾಜಣ್ಣ ಸುರೇಶ, ಮಹದೇವಶೆಟ್ಟಿ, ನಾಗರಾಜು, ರಮೇಶ, ಸಿದ್ದರಾಜು ಇದ್ದರು.

ಸಂಚಾರ ಸ್ಥಗಿತ: ತಾಲ್ಲೂಕು ಕಚೇರಿ ಮುಂಭಾಗದ ಮಲೆ ಮಹದೇಶ್ವರ ಬೆಟ್ಟ ಮುಖ್ಯರಸ್ತೆ ಚಕ್ಕಡಿಗಳನ್ನು ನಿಲ್ಲಿಸಿದ್ದರಿಂದ ಈ ರಸ್ತೆಯಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ತಹಶೀಲ್ದಾರ್ ಮಾಳಿಗಯ ಮನವಿ ಸ್ವೀಕರಿಸಿ ಮಾತನಾಡಿ, ಮುಂದಿನ ದಿನಗಳಲ್ಲಿ ಕಾವೇರಿ ನದಿಯಿಂದ ಮರಳು ಸಂಗ್ರಹಣೆ ಗುತ್ತಿಗೆ ನೀಡ ಲಾಗುತ್ತಿದೆ. ಈಗ ಎತ್ತಿನ ಗಾಡಿಗಳಲ್ಲಿ ಮರಳು ಸಾಗಣೆಗೆ ಅನುಮತಿ ನೀಡಲು ಸಾಧ್ಯವಿಲ್ಲ. ಸಾಗಣೆದಾರರು ತಾಲ್ಲೂಕು ಆಡಳಿತದ ಜೊತೆ ಸಹಕಾರ ನೀಡಬೇಕು ಎಂದು ್ಯ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.