ಮರ್ಡೊಕ್ ವಿರುದ್ಧ ಪ್ರತಿಭಟನೆ
ನ್ಯೂಯಾರ್ಕ್ (ಪಿಟಿಐ): ದೇಶದ ಶಿಕ್ಷಣ ಪದ್ಧತಿಯಿಂದ ಲಾಭ ಮಾಡಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಮಾಧ್ಯಮ ದೊರೆ ರೂಪರ್ಟ್ ಮರ್ಡೊಕ್ ವಿರುದ್ಧ `ಆಕ್ಯುಪೈ ವಾಲ್ಸ್ಟ್ರೀಟ್~ ಸಂಘಟನೆಯ ಕಾರ್ಯಕರ್ತರು ಸ್ಯಾನ್ಫ್ರಾನ್ಸಿಸ್ಕೊದಲ್ಲಿ ಪ್ರತಿಭಟನೆ ನಡೆಸಿ ಅವರ ಭಾಷಣಕ್ಕೆ ಅಡ್ಡಿಪಡಿಸಿದರು.
ಫ್ಲೊರಿಡಾದ ಮಾಜಿ ಗವರ್ನರ್ ಜೆಬ್ ಬುಷ್ ಪ್ರತಿಷ್ಠಾನದ ವತಿಯಿಂದ ಏರ್ಪಡಿಸಿದ್ದ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಮರ್ಡೊಕ್ ಪ್ರಧಾನ ಭಾಷಣ ಮಾಡುತ್ತಿದ್ದಾಗ ಸಂಘಟನೆ ಕೆಲ ಕಾರ್ಯಕರ್ತರು ಸಮಾರಂಭದಿಂದ ಹೊರಗೆ ಬಂದು ಪ್ರತಿಭಟನೆ ನಡೆಸಿದರೆ, ಹಲವರು ಸಭೆಯಲ್ಲಿಯೇ ಭಾಷಣಕ್ಕೆ ಅಡ್ಡಿಪಡಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.